ಪುನೀತ್​ ರಾಜ್​ಕುಮಾರ್​ ಕುರಿತು ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ಲೇಡಿ ಬಾಡಿ ಬಿಲ್ಡರ್​ ಮಮತಾ

| Updated By: ರಾಜೇಶ್ ದುಗ್ಗುಮನೆ

Updated on: Jan 16, 2022 | 5:28 PM

ಕಲರ್ಸ್​ ಕನ್ನಡ ವಾಹಿನಿಯ ‘ನನ್ನಮ್ಮ ಸೂಪರ್​ ಸ್ಟಾರ್​’ ಶೋಗೆ ಬಂದಿದ್ದ ಲೇಡಿ ಬಾಡಿ ಬಿಲ್ಡರ್ ಮಮತಾ ಅವರು ಕೂಡ ಪುನೀತ್​ ಅವರನ್ನು ನೆನಪಿಸಿಕೊಂಡಿದ್ದಾರೆ.

ಪುನೀತ್​ ರಾಜ್​ಕುಮಾರ್​ ಅವರು ನಟನೆಯ ಜತೆಗೆ ತಮ್ಮ ಒಳ್ಳೆಯ ತನದಿಂದಲೂ ಜನರಿಗೆ ಹೆಚ್ಚು ಇಷ್ಟವಾಗಿದ್ದರು. ಅವರು ಮಾಡಿದ ಸಾಮಾಜಿಕ ಕೆಲಸಗಳು ಒಂದೆರಡಲ್ಲ. ಅವರು ಹೀಗೆ ಏಕಾಏಕಿ ಮೃತಪಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅವರ ಸಾವನ್ನು ಈಗಲೂ ಅಭಿಮಾನಿಗಳಿಂದ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಅವರ ಜತೆ ಒಡನಾಡಿದ ಅನೇಕರಿದ್ದಾರೆ. ಅವರನ್ನು ನೆನಪಿಸಿಕೊಳ್ಳುವ ಕಾರ್ಯ ಎಲ್ಲರಿಂದಲೂ ಆಗುತ್ತಿದೆ. ಕಲರ್ಸ್​ ಕನ್ನಡ ವಾಹಿನಿಯ ‘ನನ್ನಮ್ಮ ಸೂಪರ್​ ಸ್ಟಾರ್​’ ಶೋಗೆ ಬಂದಿದ್ದ ಲೇಡಿ ಬಾಡಿ ಬಿಲ್ಡರ್ ಮಮತಾ ಅವರು ಕೂಡ ಪುನೀತ್​ ಅವರನ್ನು ನೆನಪಿಸಿಕೊಂಡಿದ್ದಾರೆ. ತಮ್ಮನ್ನು ಪುನೀತ್​ ಹೇಗೆ ಟ್ರೀಟ್​ ಮಾಡುತ್ತಿದ್ದರು ಎಂಬುದನ್ನು ಅವರ ಹೇಳಿಕೊಂಡಿದ್ದಾರೆ. ಅವರು ಪುನೀತ್​ ಬಗ್ಗೆ ಆಡಿದ ಮಾತುಗಳು ಇಲ್ಲಿವೆ.

ಇದನ್ನೂ ಓದಿ: ಸಂಕ್ರಾಂತಿ ಹಬ್ಬದಲ್ಲಿ ಪುನೀತ್​ ರಾಜ್​ಕುಮಾರ್​ ನೆನಪು; ಫ್ಯಾನ್ಸ್​ ಜೊತೆ ಹೊಸ ಸುದ್ದಿ ಹಂಚಿಕೊಂಡ ಶಿವಣ್ಣ