‘ಸಮನ್ವಿಗೆ ದೃಷ್ಟಿ ಬಿದ್ದಿತ್ತು ಅನಿಸುತ್ತೆ’; ನನ್ನಮ್ಮ ಸೂಪರ್ ಸ್ಟಾರ್ ಸ್ಪರ್ಧಿಯ ಮಾತು
‘ಸಮನ್ವಿ ಅವರ ಕಣ್ಣು ತುಂಬಾನೇ ಅದ್ಭುತವಾಗಿತ್ತು. ಅವಳಿಗೆ ದೃಷ್ಟಿ ಬಿದ್ದಿತ್ತು ಅಂತ ನನಗೆ ಅನ್ನಿಸುತ್ತದೆ’ ಎಂದು ಹೇಳಿದ್ದಾರೆ ಮಮತಾ. ಅವರು ಸಮನ್ವಿ ಬಗ್ಗೆ ಆಡಿದ ಮೆಚ್ಚುಗೆಯ ಮಾತುಗಳು ಇಲ್ಲಿವೆ.
‘ನನ್ನಮ್ಮ ಸೂಪರ್ ಸ್ಟಾರ್’ ಸ್ಪರ್ಧಿಯಾಗಿದ್ದ ಬಾಲ ಕಲಾವಿದೆ ಸಮನ್ವಿ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ತೀರಿಕೊಂಡಳು. ಚಿಕ್ಕ ವಯಸ್ಸಿಗೆ ಅಪಾರ ಕಲೆ ಹೊಂದಿದ್ದ ಅವಳು, ಈ ರೀತಿ ದುರ್ಮರಣ ಹೊಂದಿರುವುದನ್ನು ಯಾರಿಂದಲೂ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಅವಳ ಸಾವಿನ ಬಗ್ಗೆ ಸಾಕಷ್ಟು ಮಂದಿ ಬೇಸರದ ನುಡಿಗಳನ್ನು ಆಡಿದ್ದಾರೆ. ನಿರೂಪಕ, ನಟ ಸೃಜನ್ ಲೋಕೇಶ್, ನಟಿ, ನಿರೂಪಕಿ ಅನುಪಮಾ ಗೌಡ ಸೇರಿ ಅನೇಕರು ಸಮನ್ವಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಈ ಶೋನ ಸ್ಪರ್ಧಿಯಾಗಿದ್ದ ಲೇಡಿ ಬಾಡಿ ಬಿಲ್ಡರ್ ಮಮತಾ ಅವರು ಮಾತನಾಡಿದ್ದಾರೆ. ‘ಸಮನ್ವಿ ಅವರ ಕಣ್ಣು ತುಂಬಾನೇ ಅದ್ಭುತವಾಗಿತ್ತು. ಅವಳಿಗೆ ದೃಷ್ಟಿ ಬಿದ್ದಿತ್ತು ಅಂತ ನನಗೆ ಅನ್ನಿಸುತ್ತದೆ’ ಎಂದು ಹೇಳಿದ್ದಾರೆ ಮಮತಾ. ಅವರು ಸಮನ್ವಿ ಬಗ್ಗೆ ಆಡಿದ ಮೆಚ್ಚುಗೆಯ ಮಾತುಗಳು ಇಲ್ಲಿವೆ.
ಇದನ್ನೂ ಓದಿ: Samanvi Funeral: ಬೆಂಗಳೂರಿನಲ್ಲಿ ನೆರವೇರಿದ ಬಾಲನಟಿ ಸಮನ್ವಿ ಅಂತ್ಯಕ್ರಿಯೆ; ಮುಗಿಲುಮುಟ್ಟಿದ ಆಕ್ರಂದನ
Latest Videos