ದಸರಾ ಆಯುಧ ಪೂಜೆ ವೇಳೆ ರೈಫಲ್​ನಿಂದ ಗುಂಡು ಹಾರಿಸಿದ ಲೇಡಿ ಸಿಂಗಂ ಅಂಕಿತಾ ಶರ್ಮ; ವಿಡಿಯೋಗೆ ಭಾರೀ ಟೀಕೆ

Updated on: Oct 21, 2026 | 10:39 PM

ಛತ್ತೀಸ್‌ಗಢದ "ಲೇಡಿ ಸಿಂಗಂ" ಎಂದೇ ಹೆಸರುವಾಸಿಯಾಗಿರುವ ಐಪಿಎಸ್ ಅಧಿಕಾರಿ ಅಂಕಿತಾ ಶರ್ಮಾ ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದೆ. ಅಂಕಿತಾ ಶರ್ಮಾ ಪಶ್ಚಿಮ ಛತ್ತೀಸ್‌ಗಢದ ರಾಜ್‌ನಂದಗಾಂವ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್​ಪಿ) ಸೇವೆ ಸಲ್ಲಿಸುತ್ತಿದ್ದಾರೆ. ದಸರಾ ಮತ್ತು ವಿಜಯದಶಮಿಯ ಅಂಗವಾಗಿ ಪೊಲೀಸ್ ಇಲಾಖೆಯಲ್ಲಿ ಸಾಂಪ್ರದಾಯಿಕವಾಗಿ ನಡೆಯುವ 'ಶಸ್ತ್ರ ಪೂಜೆ'ಯ ಸಂದರ್ಭದಲ್ಲಿ, ಸೀರೆ ಉಟ್ಟಿದ್ದ ಎಸ್‌ಪಿ ಅಂಕಿತಾ ಶರ್ಮಾ ಎಕೆ-47 ಅಸಾಲ್ಟ್ ರೈಫಲ್ ಹಿಡಿದು ಗಾಳಿಯಲ್ಲಿ ಸಾಲು ಸಾಲು ಗುಂಡು ಹಾರಿಸಿದ್ದಾರೆ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ನವದೆಹಲಿ, ಅಕ್ಟೋಬರ್ 21: ಛತ್ತೀಸ್‌ಗಢದ “ಲೇಡಿ ಸಿಂಗಂ” ಎಂದೇ ಹೆಸರುವಾಸಿಯಾಗಿರುವ ಐಪಿಎಸ್ ಅಧಿಕಾರಿ ಅಂಕಿತಾ ಶರ್ಮಾ ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದೆ. ಅಂಕಿತಾ ಶರ್ಮಾ ಪಶ್ಚಿಮ ಛತ್ತೀಸ್‌ಗಢದ ರಾಜ್‌ನಂದಗಾಂವ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್​ಪಿ) ಸೇವೆ ಸಲ್ಲಿಸುತ್ತಿದ್ದಾರೆ. ದಸರಾ ಮತ್ತು ವಿಜಯದಶಮಿಯ ಅಂಗವಾಗಿ ಪೊಲೀಸ್ ಇಲಾಖೆಯಲ್ಲಿ ಸಾಂಪ್ರದಾಯಿಕವಾಗಿ ನಡೆಯುವ ‘ಶಸ್ತ್ರ ಪೂಜೆ’ಯ ಸಂದರ್ಭದಲ್ಲಿ, ಸೀರೆ ಉಟ್ಟಿದ್ದ ಎಸ್‌ಪಿ ಅಂಕಿತಾ ಶರ್ಮಾ ಎಕೆ-47 ಅಸಾಲ್ಟ್ ರೈಫಲ್ ಹಿಡಿದು ಗಾಳಿಯಲ್ಲಿ ಸಾಲು ಸಾಲು ಗುಂಡು ಹಾರಿಸಿದ್ದಾರೆ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ವೀಡಿಯೊ ವೈರಲ್ ಆಗುತ್ತಿದ್ದಂತೆ, ಹಲವು ಮಾಜಿ ಭಾರತೀಯ ಸೇನಾಧಿಕಾರಿಗಳು ಮತ್ತು ಭದ್ರತಾ ತಜ್ಞರು ಅಧಿಕಾರಿಯ ಈ ನಡೆಗೆ ಕಟು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸುವುದು ಸಾರ್ವಜನಿಕರ ಭದ್ರತೆಗೆ ಅತ್ಯಂತ ಅಪಾಯಕಾರಿ. ತರಬೇತಿ ಪಡೆದ ಐಪಿಎಸ್ ಅಧಿಕಾರಿಯೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಇಂತಹ ಅಪಾಯಕಾರಿ ಪ್ರದರ್ಶನ ನೀಡಿರುವುದು ಭದ್ರತಾ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More