ಕುಣಿಗಲ್​ನ ಗೊಟ್ಟಿಕೆರೆಯ ಮನೆಯೊಂದರ ಅಡುಗೆ ಮನೆಯ ಪಾತ್ರೆಯಲ್ಲಿ ಕೆರೆ ಹಾವು ಪ್ರತ್ಯಕ್ಷ

| Updated By: ಆಯೇಷಾ ಬಾನು

Updated on: Dec 20, 2022 | 8:07 AM

ಅಡುಗೆ ಮನೆಯ ಪಾತ್ರೆಯಲ್ಲಿ ಮಲಗಿದ್ದ ಕೆರೆಯ ಹಾವು. ಕುಣಿಗಲ್​ನ ಗೊಟ್ಟಿಕೆರೆಯ ರವಿ ಎಂಬುವರ ಮನೆಯಲ್ಲಿ ಪ್ರತ್ಯಕ್ಷ. ಪಾತ್ರೆಯಲ್ಲಿ ಬೆಚ್ಚಗೆ ಮಲಗಿದ್ದ ಕೆರೆಯ ಹಾವು ರಕ್ಷಿಸಿದ ಉರಗತಜ್ಞ.

ತುಮಕೂರು: ಅಡುಗೆ ಮನೆಯ ಪಾತ್ರೆಯಲ್ಲಿ ಮಲಗಿದ್ದ ಕೆರೆಯ ಹಾವು ಪತ್ತೆಯಾಗಿದೆ. ಹಾವನ್ನು ಕಂಡು ಜನರು ಬೆಚ್ಚಿಬಿದ್ದಿದ್ದು ಆತಂಕ ವ್ಯಕ್ತಪಡಿಸಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಗೊಟ್ಟಿಕೆರೆ ಗ್ರಾಮದ ರವಿ ಎಂಬುವವರ ಮನೆಯ ಅಡುಗೆ ಕೋಣೆಯಲ್ಲಿ ಹಾವು ಪತ್ತೆಯಾಗಿದೆ. ಪಾತ್ರೆಯಲ್ಲಿ ಬೆಚ್ಚಿಗೆ ಮಲಗಿದ್ದ ಕೆರೆಯ ಹಾವನ್ನು ನೋಡಿ ಇಡೀ ಮನೆಯವರು ಭಯಭೀತರಾಗಿದ್ದಾರೆ. ಗ್ಯಾಸ್ ಸಿಲಿಂಡರ್ ಹಿಂದೆಯಿದ್ದ ಪಾತ್ರೆಯಲ್ಲಿದ್ದ ಹಾವನ್ನು ಉರಗ ಸಂರಕ್ಷಕ ಮಾಂತೇಶ್ ರಕ್ಷಣೆ ಮಾಡಿದ್ದಾರೆ. ಎರಡು ದಿನಗಳಿಂದ ಸೇರಿಕೊಂಡಿದ್ದ ಹಾವನ್ನು ಸದ್ಯ ರಕ್ಷಿಸಲಾಗಿದೆ.

Published on: Dec 20, 2022 08:07 AM