‘ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ’: ರಾಜ್ಯ ಪುರಾತತ್ವ ಇಲಾಖೆ
ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿಯ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದೆ. ತಮ್ಮ ಮನೆಗೆ ಅಡಿಒಆಯ ಹಾಕುವಾಗ ಸಿಕ್ಕ ನಿಧಿಯನ್ನು ತಾಯಿ-ಮಗ ಸರ್ಕಾರಕ್ಕೊಪ್ಪಿಸಿದ್ದರು. ಮನೆಯ ಜಾಗದಲ್ಲಿ ಸಿಕ್ಕ ಚಿನ್ನ ನಿಧಿಯೇ ಅಲ್ಲ, ಅದು ಕುಟುಂಬಕ್ಕೇ ಸೇರಿದ್ದೆಂದು ತಜ್ಞರು ಹೇಳಿದ್ದರು. ಈ ಮಾತು ಕೇಳಿದ ಬಡ ಕುಟುಂಬವೂ ಕೊಟ್ಟ ಬಂಗಾವರನ್ನು ವಾಪಸ್ ಕೇಳಿದ. ಇದೆಲ್ಲದರ ನಡುವೆ ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕರು ಈ ಕುರಿತು ಸ್ಪಷ್ಟನೆ ನೀಡಿದ್ದು, ನಿಯಮಗಳ ಪ್ರಕಾರ, ನಿಧಿ ಕಂಡ ಕುಟುಂಬಕ್ಕೆ ಅದರ ಮೌಲ್ಯದ ಐದನೇ ಒಂದು ಭಾಗದಷ್ಟು (ಶೇ. 20) ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಗದಗ, ಜನವರಿ 12: ಲಕ್ಕುಂಡಿಯಲ್ಲಿ ಪತ್ತೆಯಾದ ನಿಧಿಯ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದೆ. ತಮ್ಮ ಮನೆಗೆ ಅಡಿಪಾಯ ಹಾಕುವಾಗ ಸಿಕ್ಕ ನಿಧಿಯನ್ನು ತಾಯಿ-ಮಗ ಸರ್ಕಾರಕ್ಕೊಪ್ಪಿಸಿದ್ದರು. ಮನೆಯ ಜಾಗದಲ್ಲಿ ಸಿಕ್ಕ ಚಿನ್ನ ನಿಧಿಯೇ ಅಲ್ಲ, ಅದು ಕುಟುಂಬಕ್ಕೇ ಸೇರಿದ್ದೆಂದು ತಜ್ಞರು ಹೇಳಿದ್ದರು. ಈ ಮಾತು ಕೇಳಿದ ಬಡ ಕುಟುಂಬವೂ ಕೊಟ್ಟ ಬಂಗಾವರನ್ನು ವಾಪಸ್ ಕೇಳಿದ. ಇದೆಲ್ಲದರ ನಡುವೆ ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕರು ಈ ಕುರಿತು ಸ್ಪಷ್ಟನೆ ನೀಡಿದ್ದು, ನಿಯಮಗಳ ಪ್ರಕಾರ, ನಿಧಿ ಕಂಡ ಕುಟುಂಬಕ್ಕೆ ಅದರ ಮೌಲ್ಯದ ಐದನೇ ಒಂದು ಭಾಗದಷ್ಟು (ಶೇ 20) ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತವು ನಿಧಿಯ ಮೌಲ್ಯವನ್ನು ನಿರ್ಧರಿಸಿದ ನಂತರ, ಆ ಮೌಲ್ಯದ ಐದನೇ ಒಂದು ಭಾಗವನ್ನು ಹಣಕಾಸಿನ ರೂಪದಲ್ಲಿ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ. ಇದು ಭಾರತೀಯ ನಿಧಿ ಕಾಯಿದೆ 1878 ರ ಅಡಿಯಲ್ಲಿರುವ ನಿಯಮವಾಗಿದ್ದು, ಪ್ರಾಮಾಣಿಕವಾಗಿ ನಿಧಿ ವರದಿ ಮಾಡಿದವರಿಗೆ ಪರಿಹಾರ ನೀಡುವ ವ್ಯವಸ್ಥೆ ಇದೆ ಎಂದು ಇಲಾಖೆ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
