ಲಕ್ಕುಂಡಿಯ ಸಿಕ್ಕ ಚಿನ್ನ ಮನೆಯಲ್ಲಿ ಇಟ್ಕೊಂಡ್ರೆ ಏನಾಗತ್ತೆ ಗೊತ್ತಾ? ಗ್ರಾಮದ ಅಜ್ಜಿಯ ಸ್ಫೋಟಕ ಹೇಳಿಕೆ!

Edited By:

Updated on: Jan 14, 2026 | 11:32 AM

ಇತ್ತೀಚೆಗಷ್ಟೆ ಲಕ್ಕುಂಡಿಯಲ್ಲಿ 8ನೇ ತರಗತಿಯ ಬಾಲಕನಿಗೆ ಸಿಕ್ಕ ಚಿನ್ನ ನಿಧಿಯೋ ಅಲ್ಲವೋ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಹಲವಾರು ತಜ್ಞರು ಈ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಇದೀಗ ನಿಧಿಯ ಹಿಂದಿರುವ ರಹಸ್ಯವನ್ನು ಮಹಿಳೆಯೊಬ್ಬರು ಬಿಚ್ಚಿಟ್ಟಿದ್ದಾರೆ. ಈ ಹಿಂದೆ ಇಲ್ಲಿನ ಗ್ರಾಮಸ್ಥರಲ್ಲಿ ಮನೆಯೊಳಗೆ ನಿಧಿ ಸಿಕ್ಕರೆ ಇಟ್ಟುಕೊಳ್ಳಬಾರದೆಂಬ ನಂಬಿಕೆಯಿತ್ತು.

ಗದಗ, ಜನವರಿ 14: ಇತ್ತೀಚೆಗಷ್ಟೆ ಲಕ್ಕುಂಡಿಯಲ್ಲಿ 8ನೇ ತರಗತಿಯ ಬಾಲಕನಿಗೆ ಸಿಕ್ಕ ಚಿನ್ನ ನಿಧಿಯೋ ಅಲ್ಲವೋ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಹಲವಾರು ತಜ್ಞರು ಈ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಇದೀಗ ನಿಧಿಯ ಹಿಂದಿರುವ ರಹಸ್ಯವನ್ನು ಮಹಿಳೆಯೊಬ್ಬರು ಬಿಚ್ಚಿಟ್ಟಿದ್ದಾರೆ. ಈ ಹಿಂದೆ ಇಲ್ಲಿನ ಗ್ರಾಮಸ್ಥರಲ್ಲಿ ಮನೆಯೊಳಗೆ ನಿಧಿ ಸಿಕ್ಕರೆ ಇಟ್ಟುಕೊಳ್ಳಬಾರದೆಂಬ ನಂಬಿಕೆಯಿತ್ತು.

ಲಕ್ಕುಂಡಿಯಲ್ಲಿ ಹುಟ್ಟಿ ಬೆಳೆದ ರತ್ನ ಎಂಬ ಮಹಿಳೆಯೊಬ್ಬರು ಟಿವಿ9ಗೆ ನೀಡಿದ ಸಂದರ್ಶನದಲ್ಲಿ ಈ ನಂಬಿಕೆಯನ್ನು ದೃಢಪಡಿಸಿದ್ದಾರೆ. ಅವರ ಪ್ರಕಾರ, ಹಿಂದೆ ಚಿನ್ನದ ನಿಧಿ ಸಿಕ್ಕ ಕೆಲವು ಕುಟುಂಬಗಳು ಅದನ್ನು ತಮ್ಮ ಮನೆಯೊಳಗೆ ತೆಗೆದುಕೊಂಡ ನಂತರ, ಅವುಗಳ ಸದಸ್ಯರು ಹುಚ್ಚು ಹಿಡಿಯುವುದು, ಆರ್ಥಿಕ ಸಂಕಷ್ಟ ಎದುರಿಸುವುದು ಮತ್ತು ಅಂತಿಮವಾಗಿ ಇಡೀ ಕುಟುಂಬ ನಾಶವಾದಂತಹ ಘಟನೆಗಳು ನಡೆದಿವೆ. ಈಗ ಸಿಕ್ಕಿರುವ ನಿಧಿಯನ್ನು ತಾಯಿ-ಮಗ ಮನೆಯಯಲ್ಲಿಯೇ ಇಟ್ಟುಕೊಂಡರೆ ಅದೇ ಗತಿ ಬರಬಹುದೆಂದು ಮಹಿಳೆ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.