ಅಥಣಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಸಕ ಲಕ್ಷ್ಮಣ ಸವದಿಯನ್ನು ಹೊಗಳಿದ್ದರ ಹಿಂದೆ ಯಾವುದಾದರೂ ಉದ್ದೇಶ ಅಡಗಿದೆಯೇ?
ಬಿಜೆಪಿಯಲ್ಲಿದ್ದಾಗ ಉಪ ಮುಖ್ಯಮಂತ್ರಿಯಂಥ ಉನ್ನತ ಸ್ಥಾನದಲ್ಲಿದ್ದ ಸವದಿಯವರು ಯಾವುದೇ ಷರತ್ತು ಬೇಡಿಕೆ ಇಡದೆ ಕಾಂಗ್ರೆಸ್ ಪಕ್ಷ ಸೇರಿದರು. ಅವರು ಬೇಡಿಕೆ ಇಟ್ಟಿದ್ದು ಕೇವಲ ಅಥಣಿ ಕ್ಷೇತ್ರದ ಅಭಿವೃದ್ಧಿಗಾಗಿ ಅದರಲ್ಲೂ ವಿಶೇಷವಾಗಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು
ಬೆಳಗಾವಿ: ಜಿಲ್ಲೆಯ ಅಥಣಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರ ಭೇಟಿಯ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಮಾವೇಶಲ್ಲಿ ಮಾತಾಡಿದ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರ ಮಾತಿನ ವರಸೆ ಗಮನಿಸಿದರೆ ಲೋಕ ಸಭಾ ಚುನಾವಣೆ-2024ರಲ್ಲಿ ಬೆಳಗಾವಿ ಕ್ಷೇತ್ರದಿಂದ ಶಾಸಕ ಲಕ್ಷ್ಮಣ ಸವದಿಯವರೇ (Laxman Savadi) ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂಬ ಗೊಂದಲ ಮೂಡುತ್ತದೆ. ತಮ್ಮ ಭಾಷಣದಲ್ಲಿ ಸಚಿವೆ ಲಕ್ಷ್ಮಿಯವರು ಸವದಿಯವರ ಗುಣಗಾನ ಮಾಡಿದ್ದೇ ಮಾಡಿದ್ದು. ಬಿಜೆಪಿಯಲ್ಲಿದ್ದಾಗ ಉಪ ಮುಖ್ಯಮಂತ್ರಿಯಂಥ ಉನ್ನತ ಸ್ಥಾನದಲ್ಲಿದ್ದ ಸವದಿಯವರು ಯಾವುದೇ ಷರತ್ತು ಬೇಡಿಕೆ ಇಡದೆ ಕಾಂಗ್ರೆಸ್ ಪಕ್ಷ ಸೇರಿದರು. ಅವರು ಬೇಡಿಕೆ ಇಟ್ಟಿದ್ದು ಕೇವಲ ಅಥಣಿ ಕ್ಷೇತ್ರದ ಅಭಿವೃದ್ಧಿಗಾಗಿ ಅದರಲ್ಲೂ ವಿಶೇಷವಾಗಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಬಿಜೆಪಿಯಲ್ಲಿದ್ದಾಗ ಅಥಣಿ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗಲಿಲ್ಲ ಎಂಬ ಸಂಗತಿಯನ್ನು ಸವದಿ (ಅಣ್ಣ) ಅಂಗೀಕರಿಸಿದ್ದರು ಎಂದು ಸಚಿವೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ