ಲಾಲ್​ಬಾಗ್​ ಮೂಲಕ ಟನಲ್ ರೋಡ್ ಬೇಡವೇ ಬೇಡ; ಸರ್ಕಾರದ ವಿರುದ್ಧ ನಟಿ ಸುಧಾ, ಸಂಯುಕ್ತಾ ಆಕ್ರೋಶ!

Updated on: Nov 02, 2025 | 12:43 PM

ಬೆಂಗಳೂರಿನ ಲಾಲ್‌ಬಾಗ್ ಮೂಲಕ ಉದ್ದೇಶಿತ ಸುರಂಗ ರಸ್ತೆ ಯೋಜನೆಗೆ ವಿರೋಧ ವ್ಯಕ್ತಪಡಿಸಿ ನಾಗರಿಕರು, ನಟಿ ಸುಧಾ ಮತ್ತು ಸಂಯುಕ್ತಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಮರಗಳ ಹಾನಿ, ಸಾರ್ವಜನಿಕರ ಅಭಿಪ್ರಾಯ ಪಡೆಯದಿರುವುದು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಪ್ರತಿಭಟನಾಕಾರರು ಕಳವಳ ವ್ಯಕ್ತಪಡಿಸಿದ್ದಾರೆ. ಟ್ರಾಫಿಕ್ ಸಮಸ್ಯೆಗಳಿಗೆ ಪರ್ಯಾಯ ಪರಿಹಾರಗಳಿಗಾಗಿ ಅವರು ಆಗ್ರಹಿಸಿದರು.

ಬೆಂಗಳೂರು, ನವೆಂಬರ್ 2:  ಬೆಂಗಳೂರಿನ ಲಾಲ್‌ಬಾಗ್ ಮೂಲಕ ಸುರಂಗ ರಸ್ತೆ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ನಟಿಯರಾದ ಸುಧಾ ಬೆಳವಾಡಿ ಮತ್ತು ಸಂಯುಕ್ತಾ ಸೇರಿದಂತೆ ಹಲವು ನಾಗರಿಕರು ಈ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರವು ಮರಗಳನ್ನು ಕಡಿಯುವುದಿಲ್ಲ ಎಂದು ಹೇಳಿದರೂ, 16.7 ಕಿಲೋಮೀಟರ್ ಸುರಂಗ ಮಾರ್ಗ ನಿರ್ಮಿಸುವಾಗ ಈ ಭರವಸೆಯನ್ನು ಉಳಿಸಿಕೊಳ್ಳಲು ಸಾಧ್ಯವೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಡ್ರೈನೇಜ್, ರಸ್ತೆ ಗುಂಡಿಗಳು ಸೇರಿದಂತೆ ಹಲವಾರು ಮೂಲಭೂತ ಸಮಸ್ಯೆಗಳಿವೆ. ಸರ್ಕಾರ ಇವುಗಳನ್ನು ಬಗೆಹರಿಸುವ ಬದಲು ಇಂತಹ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಸೂಕ್ತವಲ್ಲ. ಪರಿಸರ ಸಂರಕ್ಷಣೆ ಮತ್ತು ಭವಿಷ್ಯದ ಪೀಳಿಗೆಗೆ ಹಸಿರನ್ನು ಉಳಿಸುವುದು ನಮ್ಮ ಜವಾಬ್ದಾರಿ ಎಂದು ಸುಧಾ ಮತ್ತು ಸಂಯುಕ್ತಾ ಇಬ್ಬರೂ ಆಕ್ರೋಶ ಹೊರಹಾಕಿದ್ದಾರೆ.  ಸರ್ಕಾರ ಸುರಂಗ ರಸ್ತೆ ಯೋಜನೆಯನ್ನು ಕೈಬಿಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published on: Nov 02, 2025 12:42 PM