ರಾಜಕೀಯಕ್ಕೆ ಬರಲು ಜೈ ಭೀಮ್ ಎನ್ನುತ್ತೀರಾ? ಉತ್ತರಿಸಿದ ದುನಿಯಾ ವಿಜಯ್
ನಟ ವಿಜಯ್ ಕುಮಾರ್ ಅವರು ‘ಲ್ಯಾಂಡ್ಲಾರ್ಡ್’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಶೋಷಿತರ ಕಷ್ಟಗಳ ಕುರಿತು ಈ ಸಿನಿಮಾದಲ್ಲಿ ತೋರಿಸಲಾಗಿದೆ. ರಾಜಕೀಯಕ್ಕೆ ಬರುವ ಉದ್ದೇಶದಿಂದ ವಿಜಯ್ ಈ ರೀತಿಯ ಚಿತ್ರ ಮಾಡಿದ್ದಾರಾ ಎಂಬ ಪ್ರಶ್ನೆ ಹಲವರಿಗೆ ಇದೆ. ಅದಕ್ಕೆ ವಿಜಯ್ ಕುಮಾರ್ ಉತ್ತರ ನೀಡಿದ್ದಾರೆ.
ನಟ ದುನಿಯಾ ವಿಜಯ್ ಅವರು ‘ಲ್ಯಾಂಡ್ಲಾರ್ಡ್’ (Landlord) ಸಿನಿಮಾದಲ್ಲಿ ನಟಿಸಿದ್ದು, ಶೋಷಿತರ ಬಗ್ಗೆ ಈ ಚಿತ್ರದಲ್ಲಿ ತೋರಿಸಲಾಗಿದೆ. ರಾಜಕೀಯಕ್ಕೆ ಬರುವ ಯೋಜನೆಯಿಂದ ವಿಜಯ್ ಅವರು ಈ ರೀತಿಯ ಸಿನಿಮಾ ಮಾಡಿದ್ದಾರಾ ಎಂಬ ಪ್ರಶ್ನೆ ಕೆಲವರಿಗೆ ಇದೆ. ಅಂಥವರಿಗೆ ವಿಜಯ್ (Duniya Vijay) ಅವರು ಉತ್ತರ ನೀಡಿದ್ದಾರೆ. ‘ಒರಿಜಿನಲ್ ಆಗಿ ಯೋಚನೆ ಮಾಡುವವರಿಗೆ ಅದು ಗೊತ್ತಿದೆ. ಡೂಪ್ಲಿಕೇಟ್ ಆಗಿ ಯೋಚನೆ ಮಾಡುವವರಿಗೆ ಮಾತ್ರ ರಾಜಕೀಯ ಕಾಣುತ್ತಿದೆ. ನನಗೆ ಸಿನಿಮಾದಲ್ಲಿ ಇರುವ ರಾಜಕೀಯ ತಡೆದುಕೊಳ್ಳೋಕೇ ಕಷ್ಟ ಆಗುತ್ತಿದೆ. ಇನ್ನು ಆ ರಾಜಕೀಯಕ್ಕೆ ಹೋಗಿ ನಾನು ಏನು ಮಾಡಲಿ? ನಾನು ಅಷ್ಟು ದೊಡ್ಡ ಶ್ರೀಮಂತ ಅಲ್ಲ. ದುಡ್ಡು ಕೊಟ್ಟು ವೋಟ್ ಹಾಕಿಸಿಕೊಳ್ಳಬೇಕಾದ ಅವಶ್ಯಕತೆ ನನಗೆ ಇಲ್ಲ. ನನ್ನ ಕೆಲಸದ ಮೂಲಕ ಒಳ್ಳೆಯದು ಮಾಡುತ್ತೇನೆ. ಅಂಬೇಡ್ಕರ್ ಬಗ್ಗೆ ಓದಿಕೊಂಡ ಎಲ್ಲರೂ ಖಂಡಿತವಾಗಿ ಜೈ ಭೀಮ್ (Jai Bhim) ಅಂತಾರೆ. ಓದದೇ ಯಾರೂ ಮಾತನಾಡಬಾರದು’ ಎಂದು ದುನಿಯಾ ವಿಜಯ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
