ಭಾರತದ ಸ್ವಾತಂತ್ರ್ಯೋತ್ಸವ ಸಂಭ್ರಮವನ್ನು ಹಾಳು ಮಾಡುವ ಯೋಚನೆ ಉಗ್ರರಿಗೆದೆಯಂತೆ, ತಕ್ಕ ಶಾಸ್ತಿ ಮಾಡಲು ಭದ್ರತಾ ಪಡೆಗಳು ರೆಡಿ!
ಪಾಪದ ಯುವಕರು, ತಮ್ಮ ದೇಶದ ಯೋಧರಿಗಿಂತ ಹೆಚ್ಚಿನ ಸಂಕಲ್ಪ ಮತ್ತು ಬದ್ಧತೆಯೊಂದಿಗೆ ಉಗ್ರ ಸಂಘಟನೆ ಸೇರಿ, ಅದ್ಹೇಗೋ ಭಾರತದೊಳಗೆ ನುಗ್ಗಿ ಕೊನೆಗೆ ಭಾರತೀಯ ಸೇನೆ, ಭದ್ರತಾ ಪಡೆ ಇಲ್ಲವೇ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಗುಂಡಿಗೆ ಬಲಿಯಾಗುತ್ತಾರೆ.
ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವ ದಿನಾಚರಣೆ ಹತ್ತಿರ ಬಂದಾಗಲೆಲ್ಲ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಉಪಟಳ ಜಾಸ್ತಿಯಾಗಲಾರಂಭಿಸುತ್ತದೆ. ತನ್ನ ದೇಶದಲ್ಲಿ ಯುವಕರಿಗೆ ನೌಕರಿ ಕೊಡಲಾಗದ ಪಾಕಿಸ್ತಾನ ಅವರನ್ನು ಉಗ್ರ ಸಂಘಟನೆಗಳಿಗೆ ಒಪ್ಪಿಸಿಬಿಡುತ್ತದೆ. ನೆರೆ ರಾಷ್ಟ್ರದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಿ ಅಮಾಯಕ ಜನರನ್ನು ಕೊಲ್ಲುವುದೇ ಒಂದು ಮಹತ್ತರ ಮತ್ತು ಪುಣ್ಯದ ಕೆಲಸ ಅಂತ ಅವರನ್ನು ನಂಬಿಸಲಾಗುತ್ತದೆ. ಪಾಪದ ಯುವಕರು, ತಮ್ಮ ದೇಶದ ಯೋಧರಿಗಿಂತ ಹೆಚ್ಚಿನ ಸಂಕಲ್ಪ ಮತ್ತು ಬದ್ಧತೆಯೊಂದಿಗೆ ಉಗ್ರ ಸಂಘಟನೆ ಸೇರಿ, ಅದ್ಹೇಗೋ ಭಾರತದೊಳಗೆ ನುಗ್ಗಿ ಕೊನೆಗೆ ಭಾರತೀಯ ಸೇನೆ, ಭದ್ರತಾ ಪಡೆ ಇಲ್ಲವೇ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಗುಂಡಿಗೆ ಬಲಿಯಾಗುತ್ತಾರೆ. ಪಾಕಿಸ್ತಾನದಲ್ಲಿ ಅವರನ್ನು ಹುತಾತ್ಮರ ಪಟ್ಟಿಗೆ ಸೇರಿಸಲಾಗುತ್ತದೆ. ಅಂದಹಾಗೆ, ಮಡಿದವರ ಕುಟುಂಬದ ಸದಸ್ಯರಿಗೆ ಅಲ್ಲಿನ ಸರ್ಕಾರವಾಗಲೀ, ಉಗ್ರ ಸಂಘಟನೆಗಳಾಗಲೀ ಹಣಕಾಸಿನ ನೆರವು ನೀಡುತ್ತವೆ ಅಂದುಕೊಂಡಿದ್ದಿರಾ? ಎಂಥದ್ದು ಇಲ್ಲ ಮಾರಾಯ್ರೇ.
ಓಕೆ ವಿಷಯಕ್ಕೆ ಬರೋಣ, ಸ್ವಾತಂತ್ರ್ಯೋತ್ಸವ ದಿನಾಚರಣೆ ಕೇವಲ ಎರಡು ವಾರಗಳಷ್ಟು ದೂರದಲ್ಲಿದೆ. ಲಷ್ಕರ್-ಎ- ತೈಬಾ ಮತ್ತು ಜೈಷ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರರು ಭಾರತೀಯರ ಸಂಭ್ರಮವನ್ನು ಹಾಳು ಮಾಡುವ ಯೋಚನೆ ಮಾಡುತ್ತಿದ್ದಾರೆಂದು ರೀಸರ್ಚ್ ಮತ್ತು ಅನಾಲಿಸಿಸ್ ವಿಂಗ್ (ರಾ) ಹಾಗೂ ಗುಪ್ತಚರ ಇಲಾಖೆಗಳು ದೇಶದ ಭದ್ರತಾ ಪಡೆಗಳನ್ನು ಎಚ್ಚರಿಸಿವೆ. ಅತ್ಯಾಧುನಿಕ ಸ್ಫೋಟಕ ಸಾಮಗ್ರಿ ಮತ್ತು ಡ್ರೋನ್ಗಳ ಮೂಲಕ ಅವರು ದಾಳಿ ನಡೆಸಬಹುದೆಂದು ಅವು ಹೇಳಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿರುವ ಹಿಂದೂ ದೇವಾಲುಗಳನ್ನು ಟಾರ್ಗೆಟ್ ಮಾಡಿಕೊಂಡು ದಾಳಿ ನಡೆಸುವ ಹುನ್ನಾರದಲ್ಲಿದ್ದಾರಂತೆ ಉಗ್ರರು.
ಪ್ರತಿ ರಾಷ್ಟ್ರೀಯ ಹಬ್ಬದ ಸಂದರ್ಭದಲ್ಲಿ ಉಗ್ರರು ಇಂಥ ಪ್ರಯತ್ನಗಳನ್ನು ಮಾಡುತ್ತಾರೆ, ಆದರೆ ಯಾವತ್ತೂ ಸಫಲರಾಗುವುದಿಲ್ಲ. ಇದು ಅವರಿಗೂ ಗೊತ್ತಿದೆ. ಆದರೆ ಹುತಾತ್ಮರೆನಿಸಿಕೊಳ್ಳುವ ಭೂತ ಅವರನ್ನು ಹೊಕ್ಕಿರುತ್ತದೆ. ಹಾಗಾಗಿ ಅವರ ಆಸೆಯನ್ನು ಈಡೇರಿಸಲು ಭಾರತದ ಭದ್ರತಾ ಪಡೆಗಳು ಸನ್ನದ್ಧರಾಗಿವೆ!!
ಇದನ್ನೂ ಓದಿ: ಭಯೊತ್ಪಾದಕರ ಡ್ರೋನ್ಗಳನ್ನು ಕೌಂಟರ್ ಮಾಡಲು ದೇಶೀಯ ತಂತ್ರಜ್ಞಾನ ಕೆಲವೇ ದಿನಗಳಲ್ಲಿ ಲಭ್ಯವಾಗಲಿದೆ: ಅಮಿತ್ ಶಾ