‘ಲತಾ ಮಂಗೇಶ್ಕರ್ ನಮಗೆ ದೇವರು ಇದ್ದಂತೆ’: ಲತಾಜೀ ಬಗೆಗಿನ ನೆನಪು ಮೆಲುಕು ಹಾಕಿದ ವಾಣಿ ಹರಿಕೃಷ್ಣ
ಲತಾ ಮಂಗೇಶ್ಕರ್ ಅವರ ಕೆಲವು ಗೀತೆಗಳನ್ನು ಹಾಡುವ ಮೂಲಕ ಶ್ರೇಷ್ಠ ಗಾಯಕಿಗೆ ವಾಣಿ ಕೃಷ್ಣ ಅವರು ಗಾನ ನಮನ ಸಲ್ಲಿಸಿದ್ದಾರೆ. ಆ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಭಾರತದ ಹೆಮ್ಮೆಯ ಗಾಯಕಿ ಲತಾ ಮಂಗೇಶ್ಕರ್ ನಿಧನದಿಂದ (Lata Mangeshkar Death) ಇಡೀ ಚಿತ್ರರಂಗದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಎಲ್ಲ ಭಾಷೆಯವರಿಗೂ ಲತಾ ಎಂದರೆ ಅಚ್ಚುಮೆಚ್ಚು. ಅವರ ಅಗಲಿಕೆಯಿಂದ ಎಲ್ಲರಿಗೂ ನೋವುಂಟಾಗಿದೆ. ಅನೇಕ ಸೆಲೆಬ್ರಿಟಿಗಳು ಹಲವು ಬಗೆಯಲ್ಲಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಕನ್ನಡದ ಖ್ಯಾತ ಗಾಯಕಿ ವಾಣಿ ಹರಿಕೃಷ್ಣ ಅವರು ಕೂಡ ಲತಾ ಮಂಗೇಶ್ಕರ್ (Lata Mangeshkar) ಅವರ ಕೊಡುಗೆಯನ್ನು ಸ್ಮರಿಸಿಕೊಂಡಿದ್ದಾರೆ. ಲತಾಜೀ ಅವರ ಕೆಲವು ಗೀತೆಗಳನ್ನು ಹಾಡುವ ಮೂಲಕ ಶ್ರೇಷ್ಠ ಗಾಯಕಿಗೆ ವಾಣಿ ಕೃಷ್ಣ (Vani Harikrishna) ಅವರು ಗಾನ ನಮನ ಸಲ್ಲಿಸಿದ್ದಾರೆ. ‘ಲತಾ ಮಂಗೇಶ್ಕರ್ ಅವರು ಭೌತಿಕವಾಗಿ ಇಲ್ಲ ಎಂಬುದು ದುಃಖದ ಸಂಗತಿ. ಆದರೆ ಹಾಡುಗಳ ಮೂಲಕ ಅವರು ಶಾಶ್ವತವಾಗಿ ಇರುತ್ತಾರೆ. ಅವರ ಒಂದೊಂದು ಹಾಡಿನಿಂದಲೂ ನಾವು ಕಲಿಯುವುದು ಸಾಕಷ್ಟು ಇದೆ. ಅವರು ನಮಗೆ ಮಾನಸ ಗುರುಗಳು. ನಮ್ಮ ಪಾಲಿಗೆ ಅವರು ದೇವರು ಇದ್ದಂತೆ. ದೇವರನ್ನು ಪೂಜಿಸುವ ರೀತಿಯೇ ನಾವು ಲತಾ ಮಂಗೇಶ್ಕರ್ ಅವರನ್ನು ಪೂಜಿಸುತ್ತೇವೆ’ ಎಂದು ವಾಣಿ ಹರಿಕೃಷ್ಣ ಹೇಳಿದ್ದಾರೆ.
ಇದನ್ನೂ ಓದಿ:
‘ಲತಾ ಮಂಗೇಶ್ಕರ್ ಹಾಡುಗಳು ಔಷಧಿ ಇದ್ದಂತೆ’; ಖ್ಯಾತ ಗಾಯಕಿಗೆ ನುಡಿ ನಮನ ಸಲ್ಲಿಸಿದ ಕೆ. ಕಲ್ಯಾಣ್
‘ಬೆಳ್ಳನೆ ಬೆಳಗಾಯಿತು..’ ಎಂದು ಕನ್ನಡಿಗರ ಮನ ಗೆದ್ದಿದ್ದ ಲತಾ ಮಂಗೇಶ್ಕರ್; ಇಲ್ಲಿದೆ ಅವರ ಕನ್ನಡ ಗೀತೆ ಬಗ್ಗೆ ವಿವರ