ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ದಿವಂಗತ ಕೆ ಶಿವರಾಂ ಪತ್ನಿ ವಾಣಿ ಶಿವರಾಂ, ಪಕ್ಷಕ್ಕೆ ಬರಮಾಡಿಕೊಂಡ ಡಿಕೆ ಶಿವಕುಮಾರ್

|

Updated on: Apr 08, 2024 | 6:32 PM

ಛಲವಾದಿ ಸಮುದಾಯದ ಪ್ರಬಲ ನಾಯಕರಾಗಿದ್ದ ತಮ್ಮ ಪತಿಯನ್ನು ಬಿಜೆಪಿ ಬಳಸಿಕೊಂಡಿತೇ ವಿನಃ ಬೆಳಸುವ ಕೆಲಸ ಮಾಡದೆ ಮೋಸ ಮಾಡಿತು ಎಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಭಾವುಕ ಸ್ವರದಲ್ಲಿ ವಾಣಿ ಹೇಳಿದರು. ಪತಿಯ ಮರಣದ ನಂತರ ಟಿಕೆಟ್ ತಮಗೆ ಸಿಗಬಹುದೆಂಬ ನಿರೀಕ್ಷೆ ಪ್ರಾಯಶಃ ಅವರಲ್ಲಿತ್ತು.

ಬೆಂಗಳೂರು: ಮೊನ್ನೆಯಷ್ಟೇ ನಿಧನರಾದ ನಿವೃತ್ತ ಐಎಎಸ್ ಅಧಿಕಾರಿ, ನಟ ಮತ್ತು ರಾಜಕಾರಣಿ ಕೆ ಶಿವರಾಂ (K Shivaram) ಅವರ ಪತ್ನಿ ವಾಣಿ ಶಿವರಾಂ (Vani Shivaram) ಅವರು ಇಂದು ಕಾಂಗ್ರೆಸ್ ಪಕ್ಷ ಸೇರಿದರು. ವಾಣಿಯವರನ್ನು ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಪಕ್ಷದ ಶಾಲು ಹೊದಿಸಿ ಮತ್ತು ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ವಾಣಿಯವರೊಂದಿಗೆ ಬೇರೆ ಬೇರೆ ಪಕ್ಷಗಳ ಇನ್ನೂ ಹಲವಾರು ಮುಖಂಡರು ಕಾಂಗ್ರೆಸ್ ಪಕ್ಷ ಸೇರಿದರು. ಬಹಳ ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಶಿವರಾಂ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದರು. ಛಲವಾದಿ ಸಮುದಾಯದ ಪ್ರಬಲ ನಾಯಕರಾಗಿದ್ದ ತಮ್ಮ ಪತಿಯನ್ನು ಬಿಜೆಪಿ ಬಳಸಿಕೊಂಡಿತೇ ವಿನಃ ಬೆಳಸುವ ಕೆಲಸ ಮಾಡದೆ ಮೋಸ ಮಾಡಿತು ಎಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಭಾವುಕ ಸ್ವರದಲ್ಲಿ ವಾಣಿ ಹೇಳಿದರು. ಪತಿಯ ಮರಣದ ನಂತರ ಟಿಕೆಟ್ ತಮಗೆ ಸಿಗಬಹುದೆಂಬ ನಿರೀಕ್ಷೆ ಪ್ರಾಯಶಃ ಅವರಲ್ಲಿತ್ತು. ಇವತ್ತಿನ ಕಾರ್ಯಕ್ರಮದಲ್ಲಿ ಮೊನ್ನೆಯಷ್ಟೇ ಕಾಂಗ್ರೆಸ್ ಸೇರಿದ ತೇಜಸ್ವಿನಿ ಗೌಡ ಸಹ ಇದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಹಳೆಯ ಮೈಸೂರು ಭಾಗದಲ್ಲಿ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಿದೆ, ಎಲ್ಲಿ ನಿಮ್ಮ ಮೇಕೆದಾಟು ಯೋಜನೆ ಶಿವಕುಮಾರ್? ಸಿಪಿ ಯೋಗೇಶ್ವರ್