ವಿಧಾನಸೌಧ ಮುಖ್ಯ ರಸ್ತೆಯಲ್ಲಿಯೇ ತಡರಾತ್ರಿ ಬೈಕ್ ವ್ಹೀಲಿಂಗ್ ನಡೆಸಿ ಪುಂಡಾಟ
ಬೆಂಗಳೂರಿನ ವಿಧಾನಸೌಧದ ಮುಖ್ಯ ರಸ್ತೆಯಲ್ಲಿ ತಡರಾತ್ರಿ ವ್ಹೀಲಿಂಗ್ ನಡೆಸಿ ಯುವಕರು ಪುಂಡಾಟ ನಡೆಸಿರುವ ಘಟನೆ ನಡೆದಿದೆ. ಹೆಲ್ಮೆಟ್ ಧರಿಸದೇ ತ್ರಿಬಲ್ ರೈಡಿಂಗ್ ಜೊತೆಗೆ ರಾಶ್ ಡ್ರೈವಿಂಗ್ ಮಾಡಲಾಗಿದ್ದು, ಬೈಕ್ಗಳಿಗೆ ಕರ್ಕಶ ಸೈಲೆನ್ಸರ್‌ಗಳನ್ನು ಅಳವಡಿಸಿ ಸಂಚರಿಸುವ ಮೂಲಕ ಕಾನೂನು ಉಲ್ಲಂಘನೆ ನಡೆಸಲಾಗಿದೆ. ಟಿವಿ9 ಕ್ಯಾಮರಾದಲ್ಲಿ ದೃಶ್ಯಾವಳಿ ಸೆರೆಯಾಗಿದೆ.
ಬೆಂಗಳೂರು, ಫೆಬ್ರವರಿ 04: ವಿಧಾನಸೌಧದ ಮುಖ್ಯ ರಸ್ತೆಯಲ್ಲಿಯೇ ತಡರಾತ್ರಿ ಪುಂಡರು ವ್ಹೀಲಿಂಗ್ ನಡೆಸಿ ಹುಚ್ಚಾಟ ನಡೆಸಿದ್ದಾರೆ. ಹೈಗ್ರೌಂಡ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ, ರಾತ್ರಿ 2:30ರ ಸುಮಾರಿಗೆ ಘಟನೆ ನಡೆದಿದ್ದು, ರ‍್ಯಾಶ್ ಡ್ರೈವಿಂಗ್ ಮಾಡಿದ್ದಲ್ಲದೆ, ವ್ಹೀಲಿಂಗ್ ಕೂಡ ಮಾಡುವ ಮೂಲಕ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಹೆಲ್ಮೆಟ್ ಧರಿಸದೆ, ತ್ರಿಬಲ್ ರೈಡಿಂಗ್ ಮಾಡಲಾಗಿರುವ ದೃಶ್ಯಗಳು ಟಿವಿ9 ಕ್ಯಾಮರಾದಲ್ಲಿ ಸೆರೆಯಾಗಿವೆ. ಬೈಕ್ಗಳ ಸೈಲೆನ್ಸರ್‌ಗಳನ್ನು ಆಲ್ಟರ್ ಮಾಡಿ ಕರ್ಕಶ ಶಬ್ದದೊಂದಿಗೆ ಪುಂಡಾಟ ನಡೆಸಲಾಗಿದ್ದು, ಕ್ಯಾಮೆರಾ ಕಂಡ ತಕ್ಷಣ ನಂಬರ್ ಪ್ಲೇಟ್‌ಗಳನ್ನು ಕೈಯಿಂದ ಮರೆಮಾಚುವ ಪ್ರಯತ್ನವೂ ನಡೆದಿವೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Feb 04, 2026 07:44 AM
Follow Us
Latest Videos
ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ: ಸಾರಾ ಗೋವಿಂದು ಪ್ರತಿಕ್ರಿಯೆ
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ: ಹಲವೆಡೆ ಎಂಟ್ರಿ-ಎಕ್ಸಿಟ್ ಕ್ಲೋಸ್
ನನ್ನ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ ಅನ್ನೋದು ನನಗೆ ಗೊತ್ತು
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತ, ರೈತರಲ್ಲಿ ಆತಂಕ

