ಪ್ರತಿಭಟನೆಕಾರರ ಮೇಲೆ ಲಾಠಿಚಾರ್ಜ್ ಹಿಂದೆ ಸರ್ಕಾರದ ದುರುದ್ದೇಶ ಅಡಗಿಲ್ಲ: ಜಿ ಪರಮೇಶ್ವರ್
ಇದು ಕೇವಲ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಪ್ರಕರಣ, ಮೀಸಲಾತಿ ಹೋರಾಟದೊಂದಿಗೆ ಯಾವುದೇ ಸಂಬಂಧವಿಲ್ಲ, ಕಾನೂನು ಉಲ್ಲಂಘಿಸಬಾರದೆಂದು ಕೋರ್ಟ್ ಸ್ಪಷ್ಟವಾಗಿ ಹೇಳಿತ್ತು, ಪ್ರತಿಭಟನೆಕಾರರನ್ನು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಬಿಟ್ಟಿದ್ದರೆ ಅದು ಬೇರೆ ಪ್ರತಿಭಟನೆಗಳಿಗೂ ಪರಂಪರೆಯಾಗಿ ಬಿಡುತಿತ್ತು, ಅವರು ಮುನ್ನುಗ್ಗದ ಹಾಗೆ ತಡೆಯಲು ಲಘು ಲಾಠಿ ಪ್ರಹಾರ ಮಾಡಲಾಯಿತು ಎಂದು ಪರಮೇಶ್ವರ್ ಹೇಳಿದರು.
ಬೆಳಗಾವಿ: ಮಂಗಳವಾರದಂದು ಬೆಳಗಾವಿಯಲ್ಲಿ 2ಎ ಮೀಸಲಾತಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನೆಕಾರರ ಮೇಲೆ ಲಘು ಪ್ರಹಾರ ನಡೆದ ಹಿಂದೆ ಸರ್ಕಾರದ ಯಾವುದೇ ದುರುದ್ದೇಶವಿರಲಿಲ್ಲ, ಜಿಲ್ಲಾಡಳಿತ ಜಾರಿಗೊಳಿಸಿದ್ದ ಪ್ರತಿಬಂಧಕಾಜ್ಞೆ ಮತ್ತು ಹೈಕೋರ್ಟ್ ನೀಡಿದ ಆದೇಶವನ್ನು ಉಲ್ಲಂಘಿಸುವುದಕ್ಕೆ ಮುಂದಾದಾಗ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಅನಿವಾರ್ಯವಾಗಿ ಪೊಲೀಸರು ಕ್ರಮ ತೆಗೆದುಕೊಳ್ಳಬೇಕಾಯಿತು ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು. ಟ್ರ್ಯಾಕ್ಟರ್ ಗಳನ್ನು ಸುವರ್ಣ ಸೌಧದ ಆವರಣಕ್ಕೆ ಒಯ್ಯಕೂಡದು ಎಂದು ನ್ಯಾಯಾಲಯ ಹೇಳಿದ್ದರೂ ಸ್ವಾಮೀಜಿಯವರ ಕರೆಯ ಮೇರೆಗೆ ಟ್ರ್ಯಾಕ್ಟರ್ ಗಳನ್ನು ಮುನ್ನುಗ್ಗಿಸುವ ಪ್ರಯತ್ನವನ್ನು ಪ್ರತಿಭಟನೆಕಾರರು ಮಾಡಿದರು ಎಂದು ಪರಮೇಶ್ವರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಎಸ್ಎಂ ಕೃಷ್ಣ ಅವಧಿಯಲ್ಲಿ ದಿನವೊಂದರಲ್ಲಿ 300 ಐಟಿ ಕಂಪನಿ ನೋಂದಣಿಯಾಗಿತ್ತು: ಪರಮೇಶ್ವರ್ ಮೆಲುಕು
Latest Videos