AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿಂಗಾಯತರ ಮೇಲೆ ಕೈಯೆತ್ತು ಹೀನಕೃತ್ಯವನ್ನು ಸಿದ್ದರಾಮಯ್ಯ ಮಾಡಿದ್ದಾರೆ: ಆರ್ ಅಶೋಕ

ಲಿಂಗಾಯತರ ಮೇಲೆ ಕೈಯೆತ್ತು ಹೀನಕೃತ್ಯವನ್ನು ಸಿದ್ದರಾಮಯ್ಯ ಮಾಡಿದ್ದಾರೆ: ಆರ್ ಅಶೋಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 12, 2024 | 11:24 AM

ಸರ್ಕಾರವೇ ದಾಂಧಲೆ ನಡೆಸಿ ಪ್ರತಿಭಟನೆ ಹಿಂಸೆ ರೂಪ ತಳೆಯುವಂತೆ ಮಾಡಿದೆ, ಲಿಂಗಾಯತರ ಮೇಲೆ ಕೈ ಮಾಡಿದ ಮೊದಲ ಸರ್ಕಾರ ಇದು, ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಸ್ವಾಮೀಜಿ ಹೇಳಿದ್ದಾರೆ, ಲಾಠಿಚಾರ್ಜ್ ನಲ್ಲಿ ಗಾಯಗೊಂಡಿರುವ ಕೆಲವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಶೋಕ ಹೇಳಿದರು.

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಆಡೋದೊಂದು ಮಾಡೋದೊಂದು, ತಮ್ಮ ಭಾಷಣಗಳಲ್ಲಿ ಬಸವಣ್ಣನವರ ವಚನಗಳು ಆದರೆ ಪ್ರತಿಭಟನೆ ನಡೆಸುವ ಬಸವಣ್ಣನ ಅನುಯಾಯಿಗಳ ಮೇಲೆ ಲಾಠಿಚಾರ್ಜ್ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಗೇಲಿ ಮಾಡಿದರು. ಲಿಂಗಾಯತರ ಮೇಲೆ ಹಲ್ಲೆ ನಡೆಸುವ ಹೀನ ಕೃತ್ಯವನ್ನು ಹಿಂದೆ ಯಾವ ಮುಖ್ಯಮಂತ್ರಿಯೂ ಮಾಡಿಲ್ಲ, 1975 ರಲ್ಲಿ ಇಡೀ ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಉಂಟಾದ ಸ್ಥಿತಿ ಈಗ ರಾಜ್ಯದಲ್ಲಿ ನಿರ್ಮಾಣವಾಗಿದೆ, ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಲಿಂಗಾಯತ ಹೋರಾಟ ನಡೆದಿತ್ತು, ಅದರೆ ತಾವು ಅವರ ಮನವಿಗೆ ಸ್ಪಂದಿಸಿ ಬೇಡಿಕೆ ಈಡೇರಿಸುವ ಕೆಲಸ ಮಾಡಿದ್ದೆವು ಎಂದು ಅಶೋಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೇರಳಕ್ಕೆ ಉಪಕಾರಿ, ಕರ್ನಾಟಕಕ್ಕೆ ಮಾರಿ: ಸಿಎಂ ವಿರುದ್ಧ ಅಶೋಕ್ ಆಕ್ರೋಶಗೊಂಡಿದ್ಯಾಕೆ?