Lava Yuva Star 4G: ದೇಸಿ ಬ್ರ್ಯಾಂಡ್ ಲಾವಾ ಕಂಪನಿಯಿಂದ ₹6,499ಕ್ಕೆ 4G ಸ್ಮಾರ್ಟ್​​ಫೋನ್

|

Updated on: Aug 09, 2024 | 3:18 PM

ಈಗಲೂ ದೇಶದಲ್ಲಿ ಗರಿಷ್ಠ ಸಂಖ್ಯೆಯ ಮಾರುಕಟ್ಟೆ ಪಾಲನ್ನು ಲಾವಾ ಕಂಪನಿಯ ಫೋನ್​ಗಳು ಪಡೆದುಕೊಂಡಿವೆ. ಬಜೆಟ್ ದರಕ್ಕೆ ಬೆಸ್ಟ್ ಫೋನ್ ಒದಗಿಸುವ ಭರವಸೆಯೊಂದಿಗೆ ಲಾವಾ ಯುವ ಸರಣಿಯಲ್ಲಿ ಹೊಸ ಸ್ಮಾರ್ಟ್​ಫೋನ್ ಬಿಡುಗಡೆಯಾಗಿದೆ. ಲಾವಾ ದೇಸಿ ಕಂಪನಿಯಾಗಿದ್ದು, ಬಜೆಟ್ ಮತ್ತು ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು, ವಿವಿಧ ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ. ಬಜೆಟ್ ವರ್ಗದಲ್ಲಿ ಹಲವು ಸ್ಮಾರ್ಟ್​​ಫೋನ್​ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ. ಅಲ್ಲದೆ, ಹೆಚ್ಚಿನ ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ.

ಪ್ರೀಮಿಯಂ ಸ್ಮಾರ್ಟ್​​ಫೋನ್​ಗಳ ಮಾರುಕಟ್ಟೆ ಭರಾಟೆಯಲ್ಲೂ ಎಂಟ್ರಿ ದರದ ಫೋನ್​ಗಳ ಬೇಡಿಕೆ ಕಡಿಮೆಯಾಗಿಲ್ಲ. ಈಗಲೂ ದೇಶದಲ್ಲಿ ಗರಿಷ್ಠ ಸಂಖ್ಯೆಯ ಮಾರುಕಟ್ಟೆ ಪಾಲನ್ನು ಲಾವಾ ಕಂಪನಿಯ ಫೋನ್​ಗಳು ಪಡೆದುಕೊಂಡಿವೆ. ಬಜೆಟ್ ದರಕ್ಕೆ ಬೆಸ್ಟ್ ಫೋನ್ ಒದಗಿಸುವ ಭರವಸೆಯೊಂದಿಗೆ ಲಾವಾ ಯುವ ಸರಣಿಯಲ್ಲಿ ಹೊಸ ಸ್ಮಾರ್ಟ್​ಫೋನ್ ಬಿಡುಗಡೆಯಾಗಿದೆ. Lava Yuva Star 4G ಫೋನ್ ₹6,499 ದರಕ್ಕೆ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಹೊಸ ಫೋನ್ ಕುರಿತು ಹೆಚ್ಚಿನ ಡೀಟೇಲ್ಸ್ ಇಲ್ಲಿದೆ.

Published on: Aug 09, 2024 12:33 PM