Mysuru News: ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಕಾನೂನು ಸಚಿವ ಹೆಚ್ ಕೆ ಪಾಟೀಲ್

Mysuru News: ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಕಾನೂನು ಸಚಿವ ಹೆಚ್ ಕೆ ಪಾಟೀಲ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 24, 2023 | 1:41 PM

ಕಳೆದೊಂದು ವಾರಕ್ಕೂ ಮೀರಿದ ಅವಧಿಯಿಂದ ಉತ್ತಮ ಮಳೆಯಾಗುತ್ತಿದೆ. ಹಾಗಾಗಿ, ಜನರ ಜೊತೆ ಜನ ಪ್ರತಿನಿಧಿಗಳು ಕೂಡ ಸಂತಸದಲ್ಲಿದ್ದಾರೆ.

ಬೆಂಗಳೂರು: 16 ನೇ ವಿಧಾನ ಸಭೆಯ ಮೊದಲ ವಿಸ್ತೃತ ಅಧಿವೇಶನ (extended Assembly Session) ಕಳೆದ ಶುಕ್ರವಾರ ಸಂಪನ್ನಗೊಂಡಿತು. ಅಧಿವೇಶನದ ನಂತರ ವಾರಾಂತ್ಯದ ರಜೆಗಾಗಿ ತಮ್ಮ ಊರುಗಳಿಗೆ ತೆರಳಿದ್ದ ಕೆಲ ಸಚಿವರು ಸೋಮವಾರ ಬೆಳಗ್ಗೆ ರಾಜಧಾನಿಗೆ ಮರಳಿದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ (HK Patil) ಇಂದು ಬೆಳಗ್ಗೆ ಮೈಸೂರಿಗೆ ತೆರಳಿ ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಸಚಿವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ ಶಶಿಶೇಖರ್ ದೀಕ್ಷಿತ್ (Dr Shashi Shekhar Dixit) ಅವರು ಸಚಿವರ ಪರವಾಗಿ ಸಂಕಲ್ಪ ಪೂಜೆ ನೆರವೇರಿಸಿ ಪ್ರಸಾದ ಹಂಚಿದರು. ಮಾನ್ಸೂನ್ ವಿಳಂಬಗೊಂಡಿದ್ದರಿಂದ ಬರಗಾಲದ ಭೀತಿಯಲ್ಲಿದ್ದ ರಾಜ್ಯದಲ್ಲಿ ಕಳೆದೊಂದು ವಾರಕ್ಕೂ ಮೀರಿದ ಅವಧಿಯಿಂದ ಉತ್ತಮ ಮಳೆಯಾಗುತ್ತಿದೆ. ಹಾಗಾಗಿ, ಜನರ ಜೊತೆ ಜನ ಪ್ರತಿನಿಧಿಗಳು ಕೂಡ ಸಂತಸದಲ್ಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ