ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿಗಳು ಅಪರಾಧಿಯಾಗಿದ್ದರೆ ಕಾನೂನು ಪ್ರಕಾರ ಶಿಕ್ಷೆಯಾಗಲಿ: ಅಂದೋಲದ ಸ್ವಾಮೀಜಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 03, 2022 | 10:49 AM

ಮುರುಘಾ ಮಠದ ಶ್ರೀಗಳು ನಿರಪರಾಧಿಯಾಗಿದ್ದರೆ ಹೊರಬರುತ್ತಾರಂತೆ ಅಪರಾಧಿಯಾಗಿದ್ದರೆ ಕಾನೂನಿನ ಪ್ರಕಾರ ಶಿಕ್ಷೆಯಾಗುತ್ತದಂತೆ! ಹೇಳಲು ಏನೂ ಇಲ್ಲದಿದ್ದರೆ ಇಂಥ ಹೇಳಿಕೆಗಳನ್ನು ನೀಡಬೇಕಾಗುತ್ತದೆ.

ಯಾದಗಿರಿ: ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿಗಳ ಬಗ್ಗೆ ಬೇರೆ ಬೇರೆ ಮಠಗಳ ಸ್ವಾಮೀಜಿಗಳು ಹೇಳಿಕೆಗಳನ್ನು ನೀಡಲಾರಂಭಿಸಿದ್ದಾರೆ. ಪ್ರಕರಣ ಬಹಳ ಸೂಕ್ಷ್ಮವಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಮಾಠಾಧೀಶರಾಗಲೀ, ರಾಜಕೀಯ ನಾಯಕರಾಗಲೀ ಹೇಳಿಕೆ ನೀಡದಿರುವುದೇ ಒಳಿತು. ಯಾದಗಿರಿಯ ಸಗರದಲ್ಲಿ ಮಾತಾಡಿರುವ ಅಂದೋಲದ ಸಿದ್ಧಲಿಂಗ ಸ್ವಾಮೀಜಿ ಹೇಳಿರುತ್ತಿರುವುದನ್ನು ಕೇಳಿ. ಮುರುಘಾ ಮಠದ ಶ್ರೀಗಳು ನಿರಪರಾಧಿಯಾಗಿದ್ದರೆ ಹೊರಬರುತ್ತಾರಂತೆ ಅಪರಾಧಿಯಾಗಿದ್ದರೆ ಕಾನೂನಿನ ಪ್ರಕಾರ ಶಿಕ್ಷೆಯಾಗುತ್ತದಂತೆ! ಹೇಳಲು ಏನೂ ಇಲ್ಲದಿದ್ದರೆ ಇಂಥ ಹೇಳಿಕೆಗಳನ್ನು ನೀಡಬೇಕಾಗುತ್ತದೆ.