ಶಿವಮೂರ್ತಿ ಸ್ವಾಮೀಜಿಗಳ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಪ್ರತಿಕ್ರಿಯೆ ನೀಡುವುದಿಲ್ಲ: ಯಡಿಯೂರಪ್ಪ
ಮುಂದುವರಿದು ಮಾತಾಡಿದ ಅವರು ಹಲವಾರು ಕಾಂಗ್ರೆಸ್ ಧುರೀಣರು ಬಿಜೆಪಿ ಸೇರಲಿದ್ದಾರೆ ಅಂತ ಬಾಂಬ್ ಸಿಡಿಸಿದರು.
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪವರು (BS Yediyurappa) ಮತ್ತೊಮ್ಮೆ ಪೋಕ್ಸೋ ಕಾಯ್ದೆ ಅಡಿ ಬಂಧನಕ್ಕೊಳಗಾಗಿರುವ ಮುರುಘಾ ಮಠ (Murugha Mutt) ಶಿವಮೂರ್ತಿಗಳ ಕುರಿತು ಕಾಮೆಂಟ್ ಮಾಡಲು ನಿರಾಕರಿಸಿದರು. ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತಾಡಿದ ಯಡಿಯೂರಪ್ಪನವರು ಪ್ರಕರಣ ಈಗ ಕೋರ್ಟ್ನಲ್ಲಿರುವುದರಿಂದ (sub judice) ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು. ಮುಂದುವರಿದು ಮಾತಾಡಿದ ಅವರು ಹಲವಾರು ಕಾಂಗ್ರೆಸ್ ಧುರೀಣರು ಬಿಜೆಪಿ ಸೇರಲಿದ್ದಾರೆ ಅಂತ ಬಾಂಬ್ ಸಿಡಿಸಿದರು.
Latest Videos