ಅಸ್ಸಾಂ ಸಾರಿಗೆ ಸಂಸ್ಥೆಯೊಂದರಿಂದ 100 ಎಲೆಕ್ಟ್ರಿಕ್ ಬಸ್​ಗಳ ಆರ್ಡರ್ ಪಡೆದ ಒಲೆಕ್ಟ್ರಾ ಗ್ರೀನ್ ಟೆಕ್ ಕಂಪನಿ

ಅಸ್ಸಾಂ ಸಾರಿಗೆ ಸಂಸ್ಥೆಯೊಂದರಿಂದ 100 ಎಲೆಕ್ಟ್ರಿಕ್ ಬಸ್​ಗಳ ಆರ್ಡರ್ ಪಡೆದ ಒಲೆಕ್ಟ್ರಾ ಗ್ರೀನ್ ಟೆಕ್ ಕಂಪನಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 03, 2022 | 12:55 PM

ಮುಂದಿನ 9 ತಿಂಗಳಲ್ಲಿ 100 ಬಸ್ ಗಳನ್ನು ಪೂರೈಸಲಿರುವ ಕಂಪನಿಯು 5 ವರ್ಷದ ಅವಧಿಯವರೆಗೆ ಅವುಗಳ ನಿರ್ವಹಣೆ ಜಬಾಬ್ದಾರಿಯನ್ನು ಹೊತ್ತುಕೊಂಡಿದೆ.

ಹೈದರಾಬಾದ ಮೂಲದ ಒಲೆಕ್ಟ್ರಾ ಗ್ರೀನ್ ಟೆಕ್ ಎಲೆಕ್ಟ್ರಿಕ್ ಮೊಬಿಲಿಟಿ ಸಂಸ್ಥೆಯು (Olectra Greentech Company) ಮತ್ತೆ ಸುದ್ದಿಯಲ್ಲಿದೆ ಮಾರಾಯ್ರೇ. ಮೊನ್ನೆಯಷ್ಟೇ ತೆಲಂಗಾಣ (Telangana) ರಾಜ್ಯ ಸಾರಿಗೆ ಸಂಸ್ಥೆಗೆ 300 ಪರಿಸರ ಸ್ನೇಹಿ ಬಸ್ ಗಳನ್ನು ಪೂರೈಸಿದ್ದ ಒಲೆಕ್ಟ್ರಾ ಕಂಪನಿಗೆ ಅಸ್ಸಾಂ (Assam) ಸಾರಿಗೆ ಸಂಸ್ಥೆಯಿಂದ 151 ಕೋಟಿ ರೂ. ಮೌಲ್ಯದ 100 ಬಸ್ ಗಳ ಆರ್ಡರ್ ಸಿಕ್ಕಿದೆ. ಮುಂದಿನ 9 ತಿಂಗಳಲ್ಲಿ 100 ಬಸ್ ಗಳನ್ನು ಪೂರೈಸಲಿರುವ ಕಂಪನಿಯು 5 ವರ್ಷದ ಅವಧಿಯವರೆಗೆ ಅವುಗಳ ನಿರ್ವಹಣೆ ಜಬಾಬ್ದಾರಿಯನ್ನು ಹೊತ್ತುಕೊಂಡಿದೆ.