ಕನ್ನಡಿಗರ ತೆರಿಗೆ ಹಣಕ್ಕಾಗಿ ಹೋರಾಡುವ ಸಿಎಂ ಸಿದ್ದರಾಮಯ್ಯಗೆ ಸವಾಲೆಸೆದ ವಕೀಲ ದೇವರಾಜೇಗೌಡ
ಕಾವೇರಿ ನೀರಾವರಿ ನಿಗಮದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರಂಥ ಧೀಮಂತ ಇಂಜಿನೀಯರ್ ಗಳು ದೀಪಹಚ್ಚಿ ಹುಡುಕಿದರೂ ಸಿಗುವುದಿಲ್ಲ, ಹಿಂದಿನ ಹಗರಣಗಳನ್ನು ಓಪನ್ ಮಾಡಿಸುತ್ತೇನೆನ್ನುವ ಸಿದ್ದರಾಮಯ್ಯ ಕಾವೇರಿ ನಿಗಮದ ಹಗರಣವನ್ನೂ ತನಿಖೆಗೆ ಒಪ್ಪಿಸಲಿ ಎಂದು ದೇವರಾಜೇಗೌಡ ಹೇಳಿದರು.
ಹಾಸನ: ವಕೀಲ ಮತ್ತು ರಾಜಕಾರಣಿ ಡಿ ದೇವರಾಜೇಗೌಡ ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತಾಡುವಾಗ ನಮ್ಮ ತೆರಿಗೆ ನಮ್ಮ ಹಕ್ಕು ಅಂತ ಪ್ರತಿಭಟನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಒಂದು ನೇರ ಸವಾಲು ಎಸೆದರು. ಕಾವೇರಿ ನೀರಾವರಿ ಎಡದಂಡೆ ಮತ್ತು ಬಲದಂಡೆ ಎರಡೂ ಯೋಜನೆಗಳ ಒಟ್ಟು ಮೊತ್ತ 2013 ರಲ್ಲಿ ₹750 ಕೋಟಿ ಇದ್ದಿದ್ದು 2024ರಲ್ಲಿ ₹2300 ಕೋಟಿಯಾಗಿದೆ. ಕಳೆದ 10 ವರ್ಷಗಳ ಅವಧಿಯಲ್ಲಿ ಇದನ್ನು ಯಾಕೆ 3 ಪಟ್ಟು ಹೆಚ್ಚಿಸಲಾಗಿದೆ? ಇದು ಕನ್ನಡಿಗರ ತೆರಿಗೆ ಹಣವಲ್ಲವೇ? ಎಂದು ದೇವರಾಜೇಗೌಡ ಸಿದ್ದರಾಮಯ್ಯರನ್ನು ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ತೆರಿಗೆ ಅನ್ಯಾಯ: ಮಾಧ್ಯಮ ಪ್ರಕಟಣೆ ಮೂಲಕ ಹೋರಾಟಕ್ಕೆ ಕರೆಕೊಟ್ಟ ಸಿಎಂ ಸಿದ್ದರಾಮಯ್ಯ