ಸಿಂಗಲ್ ಆಗಿರೋನೇ ಸಿಂಹ: ಅಸಲಿ ಆಟ ತೋರಿಸಲು ರೆಡಿಯಾದ ಲಾಯರ್ ಜಗದೀಶ್
ತಮ್ಮದೇ ತಂಡದವರ ವಿರೋಧ ಇದ್ದರೂ ಕೂಡ ಮಾನವೀಯತೆಯ ದೃಷ್ಟಿಯಿಂದ ಬೇರೆಯವರಿಗೆ ಲಾಯರ್ ಜಗದೀಶ್ ಸಹಾಯ ಮಾಡಿದ್ದಾರೆ. ಆದ್ದರಿಂದ ಅವರ ತಂಡದವರು ಗರಂ ಆಗಿದ್ದಾರೆ. ಆದರೂ ಕೂಡ ಲಾಯರ್ ಜಗದೀಶ್ ಬದಲಾಗಿಲ್ಲ. ‘ಲೀಡರ್ ಆದವನು ಗುಂಪಲ್ಲಿ ಇರಲ್ಲ. ಸಿಂಗಲ್ ಆಗಿರೋನೇ ಸಿಂಹ’ ಎಂದು ಘರ್ಜಿಸೋಕೆ ಅವರು ರೆಡಿಯಾಗಿದ್ದಾರೆ.
ಲಾಯರ್ ಜಗದೀಶ್ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮಕ್ಕೆ ಕಾಲಿಟ್ಟಿದ್ದು ಅವರ ಅಭಿಮಾನಿಗಳಿಗೆ ಖುಷಿ ಆಗಿದೆ. ಮೊದಲ ಸಂಚಿಕೆಯಿಂದಲೇ ಜಗದೀಶ್ ಗಮನ ಸೆಳೆಯುತ್ತಿದ್ದಾರೆ. ಲಾಯರ್ ಜಗದೀಶ್ ಅವರು ಗುಂಪಿನಲ್ಲಿ ಕಾಣೆಯಾಗುತ್ತಿಲ್ಲ. ಸಿಂಗಲ್ ಆಗಿಯೇ ತಮ್ಮ ಅಭಿಪ್ರಾಯವನ್ನು ಹೇಳುವ ಮೂಲಕ ಅನೇಕರನ್ನು ಅವರು ಎದುರು ಹಾಕಿಕೊಂಡಿದ್ದಾರೆ. ಆ ಬಗ್ಗೆ ಅವರು ನರಕವಾಸಿಗಳ ಜೊತೆ ಮಾತನಾಡಿದ್ದಾರೆ. ಜಗದೀಶ್ ಅವರ ತಂತ್ರಗಾರಿಕೆ ಬೇರೆ ರೀತಿಯೇ ಇದೆ. ಸ್ವರ್ಗದಲ್ಲಿ ಇರುವ ಅವರು ನರಕದ ಮಂದಿ ಜೊತೆ ಕ್ಲೋಸ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.