Karnataka Assembly Polls: ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸವದಿ ‘ಲಕ್ಷ್ಮಣ’ ರೇಖೆ ದಾಟಿ ಕಾಂಗ್ರೆಸ್ ಅಂಗಳಕ್ಕೆ ಬಂದಿದ್ದಾರೆ!
ತಮ್ಮ ಮಗನಿಗೂ ಟಿಕೆಟ್ ಕೇಳಿದ್ದೀರಾ ಅಂತ ಪತ್ರಕರ್ತರು ಕೇಳಿದಾಗ, ಬೇರೆ ನಾಯಕರಂತೆ ತನಗೆ ಪುತ್ರ ವ್ಯಾಮೋಹ ಇಲ್ಲ ಎಂದು ಹೇಳಿದರು.
ಬೆಂಗಳೂರು: ಲಕ್ಷ್ಮಣ ಸವದಿಯವರು (Laxman Savadi) ಇಂದು ಸಾಯಂಕಾಲ ಕಾಂಗ್ರೆಸ್ ಪಕ್ಷ ಸೇರುವುದಾಗಿ ಹೇಳಿದ್ದಾರೆ. ಬೆಂಗಳೂರಲ್ಲಿ ಇಂದು ಸಿದ್ದರಾಮಯ್ಯರನ್ನು (Siddaramaiah) ಭೇಟಿಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸವದಿ ಕಾಂಗ್ರೆಸ್ ಪಕ್ಷದ ನಾಯಕರ ಮುಂದೆ ಎರಡು ಷರತ್ತುಗಳನ್ನು ಇಟ್ಟಿರುವುದಾಗಿ ಹೇಳಿದರು. ಮೊದಲನೇಯದ್ದು ಅವರಿಗೆ ಅಥಣಿ ಕ್ಷೇತ್ರದ (Athani constituency) ಟಿಕೆಟ್ ನೀಡಬೇಕು ಮತ್ತು ಸರ್ಕಾರ ರಚನೆಯಾದ ಮೇಲೆ ಅಥಣಿ ಕ್ಷೇತ್ರದಲ್ಲಿ ಅರ್ಧಕ್ಕೆ ನಿಂತಿರುವ ನಿರಾವರಿ ಯೋಜನೆಗಳನ್ನು ಪೂರ್ತಿಗೊಳಿಸಬೇಕು. ತಮ್ಮ ಮಗನಿಗೂ ಟಿಕೆಟ್ ಕೇಳಿದ್ದೀರಾ ಅಂತ ಪತ್ರಕರ್ತರು ಕೇಳಿದಾಗ, ಬೇರೆ ನಾಯಕರಂತೆ ತನಗೆ ಪುತ್ರ ವ್ಯಾಮೋಹ ಇಲ್ಲ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos