ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬೆಂಕಿಯುಗುಳಿದ ವಿಪಕ್ಷ ನಾಯಕ ಆರ್ ಅಶೋಕ
ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ಜಮೀನು ಕಬಳಿಸಿದ್ದಾರೆ ಮತ್ತು ದಲಿತರ ಹಣ ಲೂಟಿ ಮಾಡಿದ್ದಾರೆ. ಹಾಗಾಗಿ ಶೋಷಿತ ವರ್ಗಗಳ ಉದ್ಧಾರಕ ಎಂದು ಪೋಸು ನೀಡುವ ಅವರಿಗೆ ತಮ್ಮ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ, ಎನ್ ಡಿಎ ಒಕ್ಕೂಟದ ಶಾಸಕರು ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದೇವೆ ಎಂದು ಅಶೋಕ ಹೇಳಿದರು.
ಬೆಂಗಳೂರು: ರಾಜ್ಯಪಾಲರನ್ನು ಭೇಟಿಯಾಗಿ ಮುಡಾ ಹಗರಣ ಮತ್ತು ಇತರ ಹಗರಣಗಳ ಬಗ್ಗೆ ದೂರು ಸಲ್ಲಿಸಿ ಹೊರಬಂದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿರೋಧ ಪಕ್ಷದ ನಾಯಕ ಅರ್ ಅಶೋಕ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬೆಂಕಿಯುಗುಳಿದರು. ಮುಡಾದಲ್ಲಿ ನಡೆದಿರೋದು ದೊಡ್ಡ ಹಗರಣ, ನಿವೇಶನಗಳಿಗಾಗಿ 86,000 ಅರ್ಜಿ ಸಲ್ಲಿಸಿದ್ದರೂ ಕೇವಲ ಸಿದ್ದರಾಮಯ್ಯ ಕುಟುಂಬಕ್ಕೆ ಮಾತ್ರ ಹೇಗೆ 14 ಸೈಟುಗಳನ್ನು ನೀಡಲಾಯಿತು? 3.16 ಎಕರೆ ಜಮೀನು 4 ದಲಿತ ಸಹೋದರರಿಗೆ ಸೇರಿದ್ದು, ಕ್ರಯ ಪತ್ರದಲ್ಲಿ ಕೇವಲ ಒಬ್ಬನ ಸಹಿ ಮಾತ್ರ ಇದೆ. ಆದರೆ ಈ ಸಹೋದರರು ಈಗ ರಾಷ್ಟ್ರೀಯ ಪರಿಶಿಷ್ಟ ಜಾತಿ/ ಪಂಗಡ ನಿಗಮಕ್ಕೆ ಪತ್ರ ಬರೆದಿದ್ದಾರೆ ಎಂದು ಅಶೋಕ ಹೇಳಿದರು. ವಿರೋಧ ಪಕ್ಷಗಳಿಗೆ ಸದನದಲ್ಲಿ ಪ್ರಶ್ನೆ ಕೇಳುವ, ಸಂವೈಧಾನಿಕ ಅಧಿಕಾರವಿದೆ. ಆದರೆ ಸ್ಪೀಕರ್ ಅವರನ್ನು ತಮ್ಮ ಕಡೆ ವಾಲಿಸಿಕೊಂಡಿರುವ ಸಿದ್ದರಾಮಯ್ಯ ನಮ್ಮ ಹಕ್ಕು ಮತ್ತು ಅಧಿಕಾರಗಳನ್ನು ಮೊಟಕುಗೊಳಿಸಿದ್ದಾರೆ. ಮುಖ್ಯಮಂತ್ರಿಯ ವಿರುದ್ಧ ಮಾಡಿರುವ ಅರೋಪಗಳಿಗೆ ಇವತ್ತು ನಾವೆಲ್ಲಿ ದಾಖಲೆಗಳನ್ನು ಸದನದ ಮುಂದೆ ಇಡುತ್ತೇವೆಯೋ ಅಂತ ಹೆದರಿ ಹೇಡಿಯಂತೆ ಸದನದಿಂದ ಪಲಾಯನಗೈದಿದ್ದಾರೆ ಎಂದು ಅಶೋಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Assembly Session: ಗ್ರೇಟರ್ ಬೆಂಗಳೂರು ರೂಪುರೇಷೆ ಚರ್ಚಿಸಲು ಸದನ ಸಮಿತಿ ರಚಿಸಲು ಆಗ್ರಹಿಸಿದ ಆರ್ ಅಶೋಕ