ಬೆಳಗಾವಿ ಅಧಿವೇಶನ: ಅಂಕಿ ಅಂಶಗಳಲ್ಲದೆ ಸಿದ್ದರಾಮಯ್ಯ ಜೊತೆ ವಾದಕ್ಕೆ ಬಿದ್ದ ಆರ್ ಅಶೋಕ ಮಾತಾಡಲಾಗದೆ ತಡವರಿಸಿದರು!

|

Updated on: Dec 14, 2023 | 6:39 PM

ಮೊದಲ ಅವಧಿಗೆ ತಾವು ಮುಖ್ಯಮಂತ್ರಿಯಾಗಿದ್ದಾಗ 14 ಲಕ್ಷ 42 ಸಾವಿರ ಮನೆಗಳನ್ನು ಕಟ್ಟಿದ್ದನ್ನು ಮತ್ತು ಮತ್ತು ಈ ಬಾಬತ್ತಿನಲ್ಲಿ ಹಣ ಸಂದಾಯ ಆಗಿರೋದನ್ನು ಸಾಬೀತು ಮಾಡುವೆ ಎಂದು ಹೇಳಿದ ಸಿದ್ದರಾಮಯ್ಯ ಬಿಜೆಪಿ ಆಡಳಿತದ 3 ವರ್ಷ 10 ತಿಂಗಳು ಅವಧಿಯಲ್ಲಿ ಎಷ್ಟು ಮನೆ ಕಟ್ಟಲಾಗಿದೆ ದಾಖಲೆ ಕೊಡಿ ಅಂತ ವಿರೋಧ ಪಕ್ಷದ ನಾಯಕನಿಗೆ ಸವಾಲು ಎಸೆಯುತ್ತಾರೆ.

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಜೊತೆ ಸದನದಲ್ಲಿ ಮಾತಾ ರುವಾಗ ಬಹಳ ಎಚ್ಚರದಿಂದ ಮಾತಾಡಬೇಕಾಗುತ್ತದೆ. ಅಂಕಿ ಅಂಶಗಳ (facts and figures) ಜೊತೆ ಮಾತಾಡಿದರೆ ಮಾತ್ರ ಬಚಾವಾಗಬಹುದು, ಇಲ್ಲದಿದ್ದರೆ ಅವರು ಬಾಯಿ ಮುಚ್ಚಿಸಿಬಿಡುತ್ತಾರೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ಅವರಿಗೆ ದಾಖಲೆ, ಕಾನೂನು, ಅಂಕಿ ಅಂಶಗಳು ಗೊತ್ತಿಲ್ಲ ಅಂತ ಅವರ ಪಕ್ಷದ ಶಾಸಕರೇ ಹೇಳುತ್ತಾರೆ. ವಸತಿ ಯೋಜನೆ ಬಗ್ಗೆ ಸದನದಲ್ಲಿ ಮಾತಾಡುವಾಗ ಅವರು ಸಿದ್ದರಾಮಯ್ಯನವರ ಎದುರು ಸರಿಯಾದ ದಾಖಲೆಗಳಿಲ್ಲದೆ, ಪೆಪೆ..ಪೆಪೆ.. ಮಾಡುವ ಪ್ರಸಂಗ ಎದುರಿಸಬೇಕಾಯಿತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಾವು ಎಷ್ಟು ವರ್ಷ ಸಿಎಂ ಆಗಿ ಕೆಲಸ ಮಾಡಿದ್ದು ಅಂತ ಸಿದ್ದರಾರಮಯ್ಯ ಕೇಳಿದರೆ, ಅಶೋಕ ಆರೂವರೆ ವರ್ಷ ಅನ್ನುತ್ತಾರೆ. ರೀ ಸ್ವಾಮಿ ಸಂವಿಧಾನಕ್ಕೆ ವೀರೋಧವಾಗಿ ಮಾತಾಡ್ತೀರಲ್ಲ, ಮುಖ್ಯಮಂತ್ರಿ ಮತ್ತು ಸರ್ಕಾರದ ಅವಧಿ ಇರೋದೆ 5 ವರ್ಷ ಅಂತ ಸಿದ್ದರಾಮಯ್ಯ ತರಾಟೆಗೆ ತೆಗದುಕೊಳ್ಳುತ್ತಾರೆ. ಆಶೋಕ್ ಪೆಪೆ ಮಾಡುತ್ತಾ ಅಸಂಬದ್ಧ ಸಮರ್ಥನೆ ನೀಡಲು ಪ್ರಯತ್ನಿಸುತ್ತಾರೆ. ಆಗ ಸಿಎಂ, ವೃಥಾ ಆರೋಪ ಮಾಡಬೇಡಿ ದಾಖಲೆಗಳಿದ್ದರೆ ಮಾತಾಡಿ ಅನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ