ಸರ್ಕಾರದ ಪ್ರತಿನಿಧಿಯೆದುರೇ ಅಧಿಕಾರದಲ್ಲಿರುವವರನ್ನು ತರಾಟೆಗೆ ತೆಗೆದುಕೊಂಡ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ

ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಸಚಿವರಲ್ಲಿ ಸತೀಶ್ ಜಾರಕಿಹೊಳಿಯವರು ಮಾತ್ರ ನೇರವಂತಿಕೆಯ ಸಚಿವರಾಗಿರುವುದರಿಂದ ನಿರ್ದಿಷ್ಟವಾಗಿ ಅವರನ್ನೇ ತಮ್ಮ ಅಹವಾಲು ಕೇಳಲು ಕಳಿಸಬೇಕೆಂದು ಕೆಂಪಣ್ಣ ಸರ್ಕಾರಕ್ಕೆ ತಾಕೀತು ಮಾಡಿದ್ದರು. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಇಬ್ಬರೂ ಗುತ್ತಿಗೆದಾರರೊಂದದಿಗೆ ಸಭೆ ನಡೆಸಿ ಕಂತುಗಳಲ್ಲಿ ಬಿಲ್ ಗಳ ಪಾವತಿ ಮಾಡೋದಾಗಿ ಹೇಳಿದ್ದರೂ ಹಣ ಬಿಡುಗಡೆಗೆ ಯಾಕೆ ತಡವಾಗುತ್ತಿದೆ ಅಂತ ಕನ್ನಡಿಗರಿಗೆ ಅರ್ಥವಾಗುತ್ತಿಲ್ಲ.

ಸರ್ಕಾರದ ಪ್ರತಿನಿಧಿಯೆದುರೇ ಅಧಿಕಾರದಲ್ಲಿರುವವರನ್ನು ತರಾಟೆಗೆ ತೆಗೆದುಕೊಂಡ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ
|

Updated on: Dec 14, 2023 | 7:37 PM

ಬೆಳಗಾವಿ: ರಾಜ್ಯದ ಗುತ್ತಿಗೆದಾರರು ಅಕ್ಷರಶಃ ರೊಚ್ಚಿಗೆದ್ದಿದ್ದಾರೆ. ಅವರ ಸಂಘದ ರಾಜ್ಯಾಧ್ಯಕ್ಷರಾದ ಕೆಂಪಣ್ಣ (Kempanna) ಇವತ್ತು ಸರ್ಕಾರದ ಪ್ರತಿನಿಧಿ (representative of government) ಎದುರೇ ಅಧಿಕಾರದಲ್ಲಿರುವವರನ್ನು ತರಾಟೆಗೆ ತೆಗೆದುಕೊಂಡರು. ಹೊರರಾಜ್ಯದ ಗುತ್ತಿಗೆದಾರರಿಗೆ ಸರ್ಕಾರ ಮಣೆ ಹಾಕುತ್ತದೆ, ಅವಧಿಗೆ ಮೊದಲು ಬಿಲ್ ಗಳನ್ನು ಬಿಡುಗಡೆ ಮಾಡುತ್ತದೆ, ಅದರೆ ರಾಜ್ಯದ ಗುತ್ತಿಗೆದಾರರ ಬಗ್ಗೆ ಯಾಕೆ ಅಸಡ್ಡೆ ಮತ್ತು ಮಲತಾಯಿ ಧೋರಣೆ ಅಂತ ಕೆಂಪಣ್ಣ ಪ್ರಶ್ನಿಸಿದರು. ಬೆಳಗಾವಿಯಲ್ಲಿ ಗುತ್ತಿಗೆದಾರರು ಇಂದು ಸರಕಾರ ತಮಗೆ ಬಾಕಿಯಿರುವ ಹಣವನ್ನ ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಧರಣಿಗೆ ಕೂತಿದ್ದರು. ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿದ ಸತೀಶ್ ಜಾರಕಿಹೊಳಿ (Satish Jarkiholi) ಅವರಿಗೆ ಲಿಖಿತ ದೂರುಗಳನ್ನು ಸಲ್ಲಿಸಿದ ಬಳಿಕ ಕೆಂಪಣ್ಣ ಗುತ್ತಿಗೆದಾರರ ಸಂಕಷ್ಟಗಳನ್ನು ಹೇಳಿಕೊಂಡರು. ರಾಜ್ಯದ ಗುತ್ತಿಗೆದಾರರು ಸಾಲಗಳನ್ನು ಮಾಡಿಕೊಂಡಿದ್ದು ಬಡ್ಡಿ ಕಟ್ಟಲಾಗದೆ ಒದ್ದಾಡುತ್ತಿದ್ದಾರೆ, ಈಗಾಗಲೇ 6 ಜನ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಬೆಳಗಾವಿ ನಗರದಲ್ಲೂ ಒಬ್ಬರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಕೆಂಪಣ್ಣ ಹೇಳಿದರು. ಬೆಳಗಾವಿ ಅಧಿವೇಶನದ ಬಳಿಕ ತಮ್ಮೊಂದಿಗೆ ಮಾತಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ ಅಂತಲೂ ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us