ಮೇಕೆದಾಟು ಪಾದಯಾತ್ರೆಯಲ್ಲಿ ಸಿದ್ದರಾಮಯ್ಯನವರಿಂದ ‘ಟಗರು ಬಂತು...’ ಹಾಡಿಗೆ ಕುಣಿತ!!

ಮೇಕೆದಾಟು ಪಾದಯಾತ್ರೆಯಲ್ಲಿ ಸಿದ್ದರಾಮಯ್ಯನವರಿಂದ ‘ಟಗರು ಬಂತು…’ ಹಾಡಿಗೆ ಕುಣಿತ!!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 02, 2022 | 7:12 PM

ಕುಣಿತಯುಕ್ತ ಪಾದಯಾತ್ರೆ ನಡೆದಿದ್ದು ಹೊಸೂರ ರಸ್ತೆಯಲ್ಲಿ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಅವರ ನೇತೃತ್ವದಲ್ಲಿ ಮೇಕೆದಾಟು ಯೋಜನೆ ಜಾರಿಗಾಗಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಕೊನೆ ಹಂತ ತಲುಪಿದೆ.

ನಮ್ಮ ನಾಯಕರು ತಮಗೆ ಗೊತ್ತಿರದ ಕ್ಷೇತ್ರಗಳಲ್ಲೂ ಸೈ ಅನಿಸಿಕೊಳ್ಳಬಲ್ಲರು ಅಂತ ಕಾಣುತ್ತೆ ಮಾರಾಯ್ರೇ. ಬಳ್ಳಾರಿಯಲ್ಲಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಕ್ರಿಕೆಟ್ ಮೈದಾನದಲ್ಲಿ ನುರಿತ ಬ್ಯಾಟರ್ ವಿರಾಟ್ ಕೊಹ್ಲಿಯಂತೆ ಬ್ಯಾಟ್ ಬೀಸುತ್ತಾರೆ. ಮತ್ತೊಂದೆಡೆ ಇಲ್ಲಿ ಬೆಂಗಳೂರಿರನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಪ್ರಭುದೇವ ಅವರ ಹಾಗೆ ಟಗರು ಬಂತು ಹಾಡಿಗೆ ಕೈ ಕಾಲು ಅಲ್ಲಾಡಿಸುತ್ತಾರೆ. ಅವರು ಕಾಲು ಅಲ್ಲಾಡಿಸುವುದು ವಿಡಿಯೋನಲ್ಲಿ ಕಾಣುತ್ತಿಲ್ಲ, ಅದರೆ ತಮ್ಮ ಮುಂದೆ ಇರುವವರನ್ನು ತಳ್ಳುತ್ತಿರುವ ಹಾಗೆ ಕೈ ಅಲ್ಲಾಡಿಸುವುದು ಕಾಣುತ್ತದೆ. ಅವರ ಮುಂದೆ ಕೆಪಿಸಿಸಿ (KPCC) ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ (Pushpa Amarnath) ಅವರು ಆವೇಷಕ್ಕೊಳಗಾದವರಂತೆ ಶಿವಣ್ಣ ಒಂದರೆ ಕ್ಷಣ ಗಾಬರಿಯಾಗುವಂತೆ ಕುಣಿಯುತ್ತಿದ್ದಾರೆ. ಅವರೊಬ್ಬರೇ ಅಲ್ಲ, ಅಲ್ಲಿರುವ ಮಹಿಳಾ ಕಾರ್ಯಕರ್ತೆಯರೆಲ್ಲ ಉತ್ಸಾಹಭರಿತರಾಗಿ ಕುಣಿಯುತ್ತಿದ್ದಾರೆ.

ಓಕೆ ಈ ಕುಣಿತಯುಕ್ತ ಪಾದಯಾತ್ರೆ ನಡೆದಿದ್ದು ಹೊಸೂರ ರಸ್ತೆಯಲ್ಲಿ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಅವರ ನೇತೃತ್ವದಲ್ಲಿ ಮೇಕೆದಾಟು ಯೋಜನೆ ಜಾರಿಗಾಗಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಕೊನೆ ಹಂತ ತಲುಪಿದೆ. ಮಂಗಳವಾರದಂದು ಪಾದಯಾತ್ರೆಯಲ್ಲಿ ಕಾಣಿಸದ ಸಿದ್ದರಾಮಯ್ಯನವರು ಇಂದು (ಬುಧವಾರ) ಭಾಗಿಯಾದರು.

ನಿನ್ನೆಯಂತೆಯೇ ಇವತ್ತು ಸಹ ಪಾದಯಾತ್ರೆ ಟ್ರಾಫಿಕ್ ಸಂಚಾರ ಸಮಸ್ಯೆಗಳನ್ನು ಸೃಷ್ಟಿಸಿತು. ಅನೇಕ ಕಡೆ ರಸ್ತೆಗಳು ಜಾಮ್ ಆಗಿದ್ದವು. ಪಾದಯಾತ್ರೆಯನ್ನು ನಾಳೆ ಕೊನೆಗೊಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ನಗರದೊಳಗೆ ಅದು ಸೃಷ್ಟಿಸುತ್ತಿರುವ ಟ್ರಾಫಿಕ್ ಸಮಸ್ಯೆಗಳನ್ನು ಗಮನಿಸಿದರೆ ಬೇಗ ಮುಗಿದರೆ ಸಾಕು ಅಂತ ಬೆಂಗಳೂರು ನಿವಾಸಿಗಳು ಅಂದುಕೊಂಡಿದ್ದರೆ ಆಶ್ಚರ್ಯವಿಲ್ಲ.

ಇದನ್ನೂ ಓದಿ:  ಕಾಂಗ್ರೆಸ್ ಪಾದಯಾತ್ರೆಗೂ ಮೊದಲು ಯೋಚಿಸ ಬೇಕಿತ್ತು ಇದು ನಾಯಕತ್ವಕ್ಕಾಗಿ ಪೈಪೋಟಿನಾ ಅಥವಾ ಸುಪ್ರೀಂಕೋರ್ಟ್ ವಿರುದ್ಧ ​ಹೋರಾಟವಾ; ಗೋವಿಂದ ಕಾರಜೋಳ