ಮಳವಳ್ಳಿ ಬಾಲಕಿಯ ಮನೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಕುಟುಂಬವನ್ನು ಸಂತೈಸಿದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 19, 2022 | 2:16 PM

ಸಿದ್ದರಾಮಯ್ಯ ಬರುವ ಸುದ್ದಿ ಗೊತ್ತಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಾಲಕಿಯ ಮನೆ ಮುಂದೆ ನೆರೆದಿದ್ದರಿಂದ ಸುಲಭವಾಗಿ ಮನೆ ಪ್ರವೇಶಿಸುವುದು ಸಾಧ್ಯವಾಗಲಿಲ್ಲ.

ಮಂಡ್ಯ: ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಬುಧವಾರ ಮಳವಳ್ಳಿ ಬಾಲಕಿ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮಾಜಿ ಸಚಿವ ಚಲುವರಾಯ ಸ್ವಾಮಿ (Cheluvarayaswamy) ಮತ್ತು ಕಾಂಗ್ರೆಸ್ ಧುರೀಣ ನರೇಂದ್ರ ಸ್ವಾಮಿ (Narendra Swamy), ಸಿದ್ದರಾಮಯ್ಯನವರ ಜೊತೆ ಇದ್ದರು. ಸಿದ್ದರಾಮಯ್ಯ ಬರುವ ಸುದ್ದಿ ಗೊತ್ತಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಾಲಕಿಯ ಮನೆ ಮುಂದೆ ನೆರೆದಿದ್ದರಿಂದ ಪಕ್ಷದ ಹಿರಿಯ ನಾಯಕನಿಗೆ ಸುಲಭವಾಗಿ ಮನೆ ಪ್ರವೇಶಿಸುವುದು ಸಾಧ್ಯವಾಗಲಿಲ್ಲ.