ಮಹಿಳೆ ನನ್ನ ಬಗ್ಗೆ ಏನಾದರೂ ಹೇಳಲಿ, ಆದರೆ ಒತ್ತುವರಿ ಮಾಡಿಕೊಂಡಿರುವ ಸರ್ಕಾರೀ ಜಾಗವನ್ನು ತೆರವು ಮಾಡಲಿ: ಅರವಿಂದ ಲಿಂಬಾವಳಿ
ಆಕೆ ಕಾಂಗ್ರೆಸ್ ಕಾರ್ಯಕರ್ತೆಯಾಗಿರುವುದರಿಂದ ಪಕ್ಷದ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದಾರೆ, ಅದರರ್ಥ ಕಾಂಗ್ರೆಸ್ ಪಕ್ಷ ಸರ್ಕಾರಿ ಜಮೀನು ಒತ್ತುವರಿಗಳಿಗೆ ಸಪೋರ್ಟ್ ಮಾಡುತ್ತದೆ ಅಂತಾಯಿತು ಎಂದು ಲಿಂಬಾವಳಿ ಹೇಳಿದರು.
ಬೆಂಗಳೂರು: ಮಹದೇವಪುರ ನಿವಾಸಿಯಾಗಿರುವ ಮಹಿಳೆಯೊಬ್ಬರು ಆ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ (Arvind Limbavali) ತನ್ನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು ಎಂದು ಮಾಡಿರುವ ಆಪಾದನೆಗೆ ಟಿವಿ9 ಕನ್ನಡ ವಾಹಿನಿಗೆ ಪ್ರತಿಕ್ರಿಯೆ ನೀಡಿರುವ ಶಾಸಕರು, ಆಕೆ ನನ್ನ ಬಗ್ಗೆ ಏನಾದರೂ ಹೇಳಿಕೊಳ್ಳಲಿ, ಆದರೆ ಮೊದಲು ತಾನು ಅತಿಕ್ರಮಣ ಮಾಡಿಕೊಂಡಿರುವ ಸರ್ಕಾರಿ ಜಾಗವನ್ನು (government land) ತೆರವು ಮಾಡಲಿ ಎಂದು ಹೇಳಿದರು. ಆಕೆ ಕಾಂಗ್ರೆಸ್ (Congress) ಕಾರ್ಯಕರ್ತೆಯಾಗಿರುವುದರಿಂದ ಪಕ್ಷದ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದಾರೆ, ಅದರರ್ಥ ಕಾಂಗ್ರೆಸ್ ಪಕ್ಷ ಸರ್ಕಾರಿ ಜಮೀನು ಒತ್ತುವರಿಗಳಿಗೆ ಸಪೋರ್ಟ್ ಮಾಡುತ್ತದೆ ಅಂತಾಯಿತು ಎಂದು ಲಿಂಬಾವಳಿ ಹೇಳಿದರು.
Follow Us
Latest Videos
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು

