Let There Be Sports: ಕ್ರೀಡೆ ಮಕ್ಕಳ ಬೆಳವಣಿಗೆಯ ಪ್ರಮುಖ ಭಾಗವಾಗಿಸಲು ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಮತ್ತು ಅದ್ವಿತೀಯ ಪುಟ್ಬಾಲರ್ ಸುನೀಲ್ ಛೆತ್ರಿ ಆಗ್ರಹ

|

Updated on: Apr 05, 2023 | 6:10 PM

ನಮ್ಮ ದೇಶದ ಕ್ರೀಡಾ ಪರಿಸರ ಬದಲಾವಣೆಯಾಗುವ ಬಗ್ಗೆ ದೇಶದ ವಿರಾಟ್ ಕೊಹ್ಲಿ ಮತ್ತು ಸುನೀಲ್ ಛೆತ್ರಿ ತೀವ್ರ ಆಶಾವಾದಿಗಳಾಗಿದ್ದಾರೆ.

ಬೆಂಗಳೂರು: ವಿದ್ಯಾಭ್ಯಾಸ ಬಹಳ ಮುಖ್ಯ ಅದರೆ ಕ್ರೀಡೆಯನ್ನು ಕಡೆಗಣಿಸಬೇಡಿ-ಬೆಂಗಳೂರಲ್ಲಿ ಇಂದು ನಡೆದ ಲೆಟ್ ದೇರ್ ಬಿ ಸ್ಪೋರ್ಟ್ಸ್ (Let There Be Sports) ಕಾರ್ಯಕ್ರಮದಲ್ಲಿ ಈ ಸಂದೇಶವನ್ನು ಬಲವಾಗಿ ಪ್ರತಿಪಾದಿಸಲಾಯಿತು. ಲೆಜೆಂಡರಿ ಕ್ರಿಕೆಟರ್ ವಿರಾಟ್ ಕೊಹ್ಲಿ (Virat Kohli) ಮತ್ತು ಭಾರತೀಯ ಫುಟ್ಬಾಲ್ ಟೀಮಿನ ಕ್ಯಾಪ್ಟನ್ ಸುನೀಲ್ ಛೆತ್ರಿ (Sunil Chhetri) ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ವಿಶ್ವದ ಸ್ಟಾರ್ ಬ್ಯಾಟರ್ ಕೊಹ್ಲಿ ಏನು ಹೇಳತ್ತಾರೆ ಅಂತ ಕೇಳಿಸಿಕೊಳ್ಳಿ.

‘ಕ್ರೀಡೆಗೆ ಮಹತ್ವ ನೀಡಬೇಕು ಎಂಬ ಸಂವಾದವನ್ನು ನಾವು ನಡೆಸುತ್ತಿದ್ದೇವೆ. ಕ್ರೀಡೆಯ ಮೂಲಕ ನಾನು ಕಂಡುಕೊಂಡಿರುವ ಅಂಶ ಇದೇ. ವಿದ್ಯಾಭ್ಯಾಸ ಬದಿಗಿಟ್ಟು ಕೇವಲ ಕ್ರೀಡೆಯ ಮೇಲೆ ಗಮನವಹಿಸಿ ಅದನ್ನೇ ವೃತ್ತಿಯನ್ನಾಗಿಸಿಕೊಳ್ಳಿ ಅಂತ ನಾವು ಸರ್ವಥಾ ಹೇಳುತ್ತಿಲ್ಲ. ಆದರೆ ಕ್ರೀಡೆ ನನಗೆ ರಿಸ್ಕ್ ತೆಗೆದುಕೊಳ್ಳುವುದನ್ನು ಕಲಿಸಿದೆ,’ ಎಂದು ಕೊಹ್ಲಿ ಹೇಳಿದರು.

ಇದನ್ನೂ ಓದಿ: Bengaluru Mysuru Expressway: ಟೋಲ್​ ದರ ಹೆಚ್ಚಳ ಇಲ್ಲ: ಆದೇಶ ವಾಪಸ್ ಪಡೆದ ಎನ್​ಹೆಚ್​ಎಐ

‘ಕೆಲ ಸಲ ನಮ್ಮ ಎದುರು ಆಯ್ಕೆಯೇ ಇಲ್ಲದಂಥ ಸನ್ನಿವೇಶ ಸೃಷ್ಟಿಯಾಗಿ ಬಿಡುತ್ತದೆ, ನೀವು ಒಂದೆಡೆ ಜಿಗಿಯಲೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದರೆ ನಿಮ್ಮ ಜಿಗಿತ ಫಲಪ್ರದವಾಗಬೇಕಾದರೆ ಸಾಕಷ್ಟು ಅಭ್ಯಾಸ ಮಾಡಿರಬೇಕಾಗುತ್ತದೆ. ಪ್ರತಿದಿನ ನಿಮ್ಮ ಶ್ರಮ ಹೇಗಿರಬೇಕೆಂದರೆ ನೀವು ಮಾಡಿದ ಜಿಗಿತಕ್ಕಾಗಿ ಪಶ್ಚಾತ್ತಾಪ ಪಡುವ ಸ್ಥಿತಿ ಎದುರಾಗಬಾರದು. ನನ್ನನ್ನು ನಾನು ಸಂರಕ್ಷಿಕೊಳ್ಳುವ ಕ್ಷಮತೆ ನನ್ನಲ್ಲಿದೆ, ಕ್ರೀಡೆ ನಿಮ್ಮನ್ನು ಆ ದಿಶೆಯೆಡೆ ಕೊಂಡೊಯ್ಯುತ್ತದೆ,’ ಎಂದು ವಿರಾಟ್ ಕೊಹ್ಲಿ ಹೇಳಿದರು.

‘ಶಾಲೆಗಳು ಕ್ರೀಡೆಗೆ ಸೂಕ್ತವಾದ ಮಹತ್ವ ನೀಡುವ ಅವಶ್ಯಕತೆಯಿದೆ, ಅದನ್ನು ಹೇಗೆ ಮಾಡಬೇಕು ಅಂತ ಹೇಳಲು ನಾನು ಸರಿಯಾದ ವ್ಯಕ್ತಿಯಲ್ಲ. ಅದರ ಬಗ್ಗೆ ಸರಿಯಾದ ಜ್ಞಾನವಿರುವ ವ್ಯಕ್ತಿಗಳು ಅದನ್ನು ಹೇಳುತ್ತಾರೆ. ಆದರೆ ಕ್ರೀಡೆ ನಮ್ಮ ಪೋಷಣೆಯ ಅವಿಭಾಜ್ಯ ಅಂಗವಾಗಿದೆ,’ ಎಂದು ಸುನೀಲ್ ಛೆತ್ರಿ ಹೇಳಿದರು.

ಇದನ್ನೂ ಓದಿ:  T20 Record: ಬರೋಬ್ಬರಿ 105 ಎಸೆತಗಳು…ಟಿ20 ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ ಬರೆದ ರಶೀದ್ ಖಾನ್

’ಕ್ರೀಡೆಯ ಹೊರತಾಗಿ ಒಂದು ಮಗುವಿಗೆ ಸಮಗ್ರ ಬೆಳವಣಿಗೆ ಒದಗಿಸುವ ಯಾವುದೇ ಆಯಮಾವಿಲ್ಲ, ಯಾವುದೇ ಕ್ಷೇತ್ರ ನೀವು ಗಮನಿಸಿ, ಅವ್ಯಾವೂ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಲಾರವು. ಕ್ರೀಡೆ ಅವನನ್ನು ಉತ್ತಮ ವ್ಯಕ್ತಿಯಾಗಿ ರೂಪಿಸುತ್ತದೆ, ಸೋಲುಗಳನ್ನು ಹೇಗೆ ಸ್ವೀಕರಿಸಬೇಕೆನ್ನುವುದನ್ನು ತಿಳಿಹೇಳುತ್ತದೆ. ಬೆಳೆಯುವ ಮಗುವಿಗೆ ಇವು ಬಹಳ ಮುಖ್ಯ ಸಂಗತಿಗಳಾಗಿವೆ. ಸೋತಾಗಲೂ ಚೇತೋಹಾರಿಯಾಗಿರುವುದು, ಸೋಲನ್ನು ಆರೋಗ್ಯಕರವಾಗಿ ಸ್ವೀಕರಿಸುವುದು ಮೊದಲಾದವುಗಳನ್ನೆಲ್ಲ ಕ್ರೀಡೆ ಕಲಿಸುತ್ತದೆ. ಹಾಗಾಗಿ ಮಗು ಇನ್ನೂ ಶಾಲೆಯಲ್ಲಿರುವಾಗಲೇ ಅಂದರೆ ಚಿಕ್ಕಂದಿನಲ್ಲೇ ಕ್ರೀಡೆಗೆ ಅದನ್ನು ಒಗ್ಗಿಕೊಳ್ಳುವಂತೆ ಮಾಡುವ ಸಮಯ ಈಗ ತಲೆದೋರಿದೆ. ಅದು ಮಕ್ಕಳಿಗೆ ಬಹಳಷ್ಟನ್ನು ಕಲಿಸುತ್ತದೆ,’ ಎಂದು ಛೆತ್ರಿ ಹೇಳಿದರು.

ನಮ್ಮ ದೇಶದ ಕ್ರೀಡಾ ಪರಿಸರ ಬದಲಾವಣೆಯಾಗುವ ಬಗ್ಗೆ ದೇಶದ ಈ ಇಬ್ಬರು ಲೆಜೆಂಡರಿ ಕ್ರೀಡಾಪಟುಗಳು ತೀವ್ರ ಆಶಾವಾದಿಗಳಾಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 01, 2023 04:48 PM