ಮೈಸೂರು: ಮನೆ ಅಂಗಳಕ್ಕೇ ಬಂದು ನಾಯಿಯ ಹೊತ್ತೊಯ್ದ ಚಿರತೆ, ಸಿಸಿಟಿವಿಲಿ ಸೆರೆಯಾಯ್ತು ದೃಶ್ಯ

Edited By:

Updated on: Jul 29, 2025 | 10:21 AM

ಮೈಸೂರಿನಲ್ಲಿ ಚಿರತೆ ದಾಳಿಯ ಭೀತಿ ಮುಂದುವರಿದಿದೆ. ಗೆಜ್ಜಗಳ್ಳಿ ಎಂಬಲ್ಲಿ ಚಿರತೆಯೊಂದು ತೋಟದ ಮನೆಯ ಕಾವಲು ನಾಯಿ ಮೇಲೆ ದಾಳಿ ಮಾಡಿದೆ. ಕೇವಲ 9 ಸೆಕೆಂಡ್‌ನಲ್ಲಿ ಸಾಕು ನಾಯಿಯನ್ನು ಬೇಟೆಯಾಡಿ ಕಚ್ಚಿ ಒಯ್ದಿರುವ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಸಿಟಿವಿ ವಿಡಿಯೋ ಇಲ್ಲಿದೆ ನೋಡಿ.

ಮೈಸೂರು, ಜುಲೈ 29: ಮೈಸೂರಿನಲ್ಲಿ ಚಿರತೆ ಆತಂಕ ಮುಂದುವರಿದಿದೆ. ಮೈಸೂರು ತಾಲ್ಲೂಕು ಗೆಜ್ಜಗಳ್ಳಿಯಲ್ಲಿ ಚಿರತೆಯೊಂದು ರಾತ್ರಿ ಮನೆ ಬಳಿ ಬಂದು ಸಾಕು ನಾಯಿಯನ್ನು ಬೇಟೆಯಾಡಿದೆ. ರಾಜೇಂದ್ರ ಎಂಬುವವರ ತೋಟದ ಮನೆಯಲ್ಲಿ ಘಟನೆ ನಡೆದಿದ್ದು, ಚಿರತೆ ನಾಯಿ ಬೇಟೆಯಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jul 29, 2025 10:07 AM