ಶಾಸಕರೊಂದಿಗೆ ಸಭೆ ನಡೆಸುವುದು ಹೊಸತೇನೂ ಅಲ್ಲ, ಹಿಂದೆಯೂ ಸಿದ್ದರಾಮಯ್ಯ ಅದನ್ನು ಮಾಡಿದ್ದರು: ಪರಮೇಶ್ವರ್
ಶಾಸಕರ ಜೊತೆ ಸಿದ್ದರಾಮಯ್ಯ ನಡೆಸುವ ಸಭೆಯಲ್ಲಿ ಡಿಕೆ ಶಿವಕುಮಾರ್ ಭಾಗವಹಿಸುತ್ತಿಲ್ಲ ಎಂಬ ವದಂತಿಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಅವರ ಆರೋಗ್ಯ ಸರಿಯಿಲ್ಲ ಎಂದು ಗೊತ್ತಾಗಿದೆ, ಅದರೆ ಅವರು ಸಭೆಗೆ ಗೈರಾಗಲಾರರು; ಹೀಗೆ ಸಭೆಯನ್ನು ನಡೆಸುವಂತೆ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ರೆ ಅದರಲ್ಲಿ ತಪ್ಪೇನಿದೆ, ಅವರು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಎಂದರು.
ಬೆಂಗಳೂರು, ಜುಲೈ 29: ಈಗಾಗಲೇ ವರದಿಯಾಗಿರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದಿನಿಂದ ಕಾಂಗ್ರೆಸ್ ಪಕ್ಷದ ಶಾಸಕರೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ. ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್, ಇದು ಹೊಸದೇನೂ ಅಲ್ಲ, 2013 ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಸಿದ್ದರಾಮಯ್ಯ ಶಾಸಕರೊಂದಿಗೆ ಸಭೆ ನಡೆಸಿದ್ದರು, ಆಗ ತಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೆ ಎಂದು ಹೇಳಿದರು. ಕ್ಷೇತ್ರದ ಕೆಲಸ ಕಾರ್ಯಗಳು, ಪಕ್ಷದ ಸಂಘಟನೆ ಮೊದಲಾದ ವಿಷಯಗಳನ್ನು ಶಾಸಕರೊಂದಿಗೆ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ಚರ್ಚಿಸಲಿದ್ದಾರೆ ಎಂದು ಪರಮೇಶ್ವರ್ ಹೇಳಿದರು.
ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿರುವುದನ್ನು ಪ್ರೂವ್ ಮಾಡೋದಾಗಿ ರಾಹುಲ್ ಹೇಳಿದ್ದಾರೆ: ಪರಮೇಶ್ವರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

