ಮೈಸೂರು: ಮನೆ ಅಂಗಳಕ್ಕೇ ಬಂದು ನಾಯಿಯ ಹೊತ್ತೊಯ್ದ ಚಿರತೆ, ಸಿಸಿಟಿವಿಲಿ ಸೆರೆಯಾಯ್ತು ದೃಶ್ಯ
ಮೈಸೂರಿನಲ್ಲಿ ಚಿರತೆ ದಾಳಿಯ ಭೀತಿ ಮುಂದುವರಿದಿದೆ. ಗೆಜ್ಜಗಳ್ಳಿ ಎಂಬಲ್ಲಿ ಚಿರತೆಯೊಂದು ತೋಟದ ಮನೆಯ ಕಾವಲು ನಾಯಿ ಮೇಲೆ ದಾಳಿ ಮಾಡಿದೆ. ಕೇವಲ 9 ಸೆಕೆಂಡ್‌ನಲ್ಲಿ ಸಾಕು ನಾಯಿಯನ್ನು ಬೇಟೆಯಾಡಿ ಕಚ್ಚಿ ಒಯ್ದಿರುವ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಸಿಟಿವಿ ವಿಡಿಯೋ ಇಲ್ಲಿದೆ ನೋಡಿ.
ಮೈಸೂರು, ಜುಲೈ 29: ಮೈಸೂರಿನಲ್ಲಿ ಚಿರತೆ ಆತಂಕ ಮುಂದುವರಿದಿದೆ. ಮೈಸೂರು ತಾಲ್ಲೂಕು ಗೆಜ್ಜಗಳ್ಳಿಯಲ್ಲಿ ಚಿರತೆಯೊಂದು ರಾತ್ರಿ ಮನೆ ಬಳಿ ಬಂದು ಸಾಕು ನಾಯಿಯನ್ನು ಬೇಟೆಯಾಡಿದೆ. ರಾಜೇಂದ್ರ ಎಂಬುವವರ ತೋಟದ ಮನೆಯಲ್ಲಿ ಘಟನೆ ನಡೆದಿದ್ದು, ಚಿರತೆ ನಾಯಿ ಬೇಟೆಯಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Published on: Jul 29, 2025 10:07 AM
Latest Videos
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
