ಮೈಸೂರು: ಜಿಂಕೆ ಮರಿ ಬೇಟೆ ಆಡಿದ ಚಿರತೆ; ಕ್ಯಾಮೆರಾದಲ್ಲಿ ಸೆರೆಯಾದ ಭಯಾನಕ ದೃಶ್ಯ ನೋಡಿ
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ವ್ಯಾಪ್ತಿಯ ನಾಗರಹೊಳೆ ಕಲ್ಲಹಳ್ಳ ಬಳಿ ಈ ದೃಶ್ಯ ಸೆರೆಯಾಗಿದೆ. ಜಿಂಕೆ ಮರಿಯನ್ನು ಬೇಟೆಯಾಡಿದ ಚಿರತೆ, ಬಳಿಕ ಅದೇ ಜಿಂಕೆ ಮರಿಯನ್ನು ಕಚ್ಚಿಕೊಂಡು ಹೊರಟ ದೃಶ್ಯಗಳು ಮೈ ಜುಮ್ ಎನಿಸುವಂತಿದೆ.
ಮೈಸೂರು: ಜಿಂಕೆ ಮರಿಯನ್ನು ಚಿರತೆ ಬೇಟೆ ಆಡಿದ ಭಯಾನಕ ದೃಶ್ಯ ಸೆರೆ ಸಿಕ್ಕಿದೆ. ಸಫಾರಿಗೆ ಹೋದವರ ಕ್ಯಾಮೆರಾದಲ್ಲಿ ಅಪರೂಪದ ದೃಶ್ಯ ಸೆರೆಯಾಗಿದೆ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ವ್ಯಾಪ್ತಿಯ ನಾಗರಹೊಳೆ ಕಲ್ಲಹಳ್ಳ ಬಳಿ ಈ ದೃಶ್ಯ ಸೆರೆಯಾಗಿದೆ. ಜಿಂಕೆ ಮರಿಯನ್ನು ಬೇಟೆಯಾಡಿದ ಚಿರತೆ, ಬಳಿಕ ಅದೇ ಜಿಂಕೆ ಮರಿಯನ್ನು ಕಚ್ಚಿಕೊಂಡು ಹೊರಟ ದೃಶ್ಯಗಳು ಮೈ ಜುಮ್ ಎನಿಸುವಂತಿದೆ. ಇದೇ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಇನ್ನಿತರ ಜಿಂಕೆಗಳು ಏನನ್ನು ಮಾಡಲಾಗದ ಸ್ಥಿತಿಯಲ್ಲಿದ್ದು, ಮೂಕ ಪ್ರೇಕ್ಷರಂತಾಗಿ ಉಳಿದಿದ್ದವು. ಪ್ರಾಣಿ ಲೋಕದಲ್ಲಿ ಇದೆಲ್ಲ ಸಾಮಾನ್ಯವಾದರೂ ಸಫಾರಿಗೆ ಹೋದ ಪ್ರವಾಸಿಗರಿಗೆ ಮಾತ್ರ ಇದು ಹೊಸ ಅನುಭವವಾಗಿತ್ತು.
ಇದನ್ನೂ ಓದಿ:
ಕಾಡುಕುರಿಯೊಂದನ್ನು ಹೊಂಚುಹಾಕುತ್ತಾ ಕುಳಿತು ಬೇಟೆಯಾಡಿದ ಚಿರತೆಯ ವಿಡಿಯೋ ವೈರಲ್!
Viral Video: ಬಾಯಲ್ಲಿ ಕಚ್ಚಿಕೊಂಡು ಹೊರಟ ಚಿರತೆಯನ್ನು ಕಚ್ಚಿದ ಮರಿ ಹೆಬ್ಬಾವು: ಮುಂದೇನಾಯ್ತು?