ನನ್ನ ಸುಳ್ಳುಗಾರ ಅನ್ನೋ ಬದಲು ಸಿದ್ದರಾಮಯ್ಯರಿಗೆ ತಾಕತ್ತಿದ್ದರೆ ತನ್ವೀರ್ ಪೀರಾ ವಿರುದ್ಧ ತನಿಖೆಗೆ ನಡೆಸಲಿ: ಬಸನಗೌಡ ಪಾಟೀಲ್ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್ ತಾವು ಮಾಡಿದ ಆರೋಪಗಳನ್ನು ಪುನರಾವರ್ತಿಸಿದರಾದರೂ, ಸಯ್ಯದ್ ತನ್ವೀರ್ ಪೀರಾ ಎಸೆದಿರುವ ಸವಾಲಿಗೆ ತಾನು ಸಿದ್ಧ ಎಂದು ಹೇಳಲಿಲ್ಲ. ತನ್ನ ವಿರುದ್ಧ ತನಿಖೆ ನಡೆಸಲಿ, ಅರೋಪ ಸಾಬೀತಾದರೆ ತಾನು ದೇಶ ಬಿಡುತ್ತೇನೆ, ಅರೋಪಗಳು ಸುಳ್ಳಾದರೆ ಬಸನಗೌಡ ರಾಜಕೀಯ ಬಿಟ್ಟು ಪಾಕಿಸ್ತಾನಕ್ಕೆ ಹೋಗುತ್ತಾರಾ? ಅಂತ ತನ್ವೀರ್ ಪೀರಾ ಬುಧವಾರ ರಾತ್ರಿ ಸವಾಲೆಸೆದಿದ್ದರು.
ಬೆಳಗಾವಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರ ಕ್ಷೇತ್ರದ ಮೌಲ್ವಿ ಸಯ್ಯದ್ ತನ್ವೀರ್ ಪೀರಾ (cleric Sayed Tanveer Peera) ವಿರುದ್ಧ ಮಾಡುತ್ತಿರುವ ಅರೋಪಗಳಿಗೆ ಬದ್ಧರಾಗಿದ್ದಾರೆ. ಗುರುವಾರ ಸಾಯಂಕಾಲ ವಿಧಾನಸಭಾ ಅಧಿವೇಶನದ ಕಾರ್ಯಕಲಾಪಗಳು (Assembly proceedings) ಕೊನೆಗೊಂಡ ಬಳಿಕ ಟಿವಿ9 ವರದಿಗಾರನೊಂದಿಗೆ ಮಾತಾಡಿದ ಅವರು ತನ್ವಿರ್ ಪೀರಾ ಕುರಿತು ತಮ್ಮಲ್ಲಿರುವ ಮಾಹಿತಿಯನ್ನು ಎನ್ಐಎ ಗೆ ನೀಡಿರುವ ಜೊತೆಗೆ ಗೃಹ ಸಚಿವ ಅಮಿತ್ ಶಾ ಅವರಿಗೂ ಪತ್ರ ಬರೆದಿರುವುದಾಗಿ ಹೇಳಿದರು. ತನ್ವೀರ್ ಯಾಕೆ ಬಾಗ್ದಾದ್ ಹೋಗುತ್ತಾನೆ, ಉತ್ತರ ಪ್ರದೇಶ, ಮುಂಬೈ ಮತ್ತು ಹೈದರಾಬಾದ್ ಗಳಿಗೆ ಯಾಕೆ ಪದೇಪದೆ ಯಾಕೆ ಭೇಟಿ ನೀಡುತ್ತಾನೆ ಮೊದಲಾದ ಸಂಗತಿಗಳ ಬಗ್ಗೆ ತನಿಖೆ ಆಗಬೇಕಿದೆ ಎಂದ ಶಾಸಕ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನನ್ನು ಸುಳ್ಳುಗಾರ, ಆರೋಪ ಮಾಡಿ ಓಡಿಹೋಗುವವ ಅಂತ ದೂರುವ ಬದಲು ತಾಕತ್ತಿದ್ದರೆ, ತನ್ವೀರ್ ವಿರುದ್ದ ಸಿಬಿಐ ಇಲ್ಲವೇ ಎನ್ಐಎ ತನಿಖೆಗೆ ಆದೇಶ ನೀಡಲಿ ಎಂದು ಸವಾಲೆಸೆದರು. ಕೊಲೆಯಾದ ಕಾರ್ಪೊರೇಟರ್ ಹೆಂಡತಿ ತನ್ವೀರ್ ವಿರುದ್ಧ ನೇರ ಆರೋಪ ಮಾಡಿದ್ದಾರೆ, ಅವನ ಚಲನವಲನ ಮತ್ತು ಚಟುವಟಿಕೆಗಳು ಶಂಕಾಸ್ಪದವಾಗಿವೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ