MLA speaks; ಬೇಕಿದ್ರೆ ಪ್ರತಾಪ್ ಸಿಂಹ ಇನ್ನೊಂದು ಮದುವೆಯಾಗಿ ಕಷ್ಟ ಏನು ಅಂತ ನಮಗೆ ಹೇಳಲಿ: ತನ್ವೀರ್ ಸೇಠ್, ಶಾಸಕ
ಕೆಲ ಸಮುದಾಯಗಳನ್ನು ಗುರಿ ಮಾಡಿ ಹಿಂದಿನ ಸರ್ಕಾರ ಮತಾಂತರ ನಿಷೇದ ಕಾನೂನು ಜಾರಿ ಮಾಡಿದೆ ಎಂದು ಸೇಟ್ ಹೇಳಿದರು
ಮೈಸೂರು: ವಿದ್ಯುತ್ ದರ ಏರಿಕೆಯಿಂದ ಜನ ತತ್ತರಿಸಿದ್ದಾರೆ ಅದನ್ನು ಕಡಿಮೆ ಮಾಡಲಿ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಮೈಸೂರು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ (Tanveer Sait) ಹೇಳಿದರು. ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಾಸಕ, ಗೃಹ ಲಕ್ಷ್ಮಿ ಯೋಜನೆ ಜಾರಿ ಮಾಡುವಾಗ ಮುಸ್ಲಿಂ ಸಮುದಾಯದ ಜನ ಎರಡೆರಡು ಮದುವೆಯಾಗಿರುತ್ತಾರೆ, ಅವರಿಗೆ ಯಾವ ಮಾನದಂಡ ಅನ್ವಯಿಸುತ್ತೆ ಅಂತ ಸಂಸದ ಪ್ರತಾಪ್ ಸಿಂಹ (Pratap Simha) ಕೇಳಿರುವುದಕ್ಕೆ ಪ್ರತಿಕ್ರಿಯಿಸುತ್ತಾ, ಪ್ರತಾಪ್ ಬೇಕಿದ್ದರೆ ಇನ್ನೊಂದು ಮದುವೆಯಾಗಲಿ ನಂತರ ಇಬ್ಬರು ಹೆಂಡಿರನ್ನು ಕಟ್ಟಿಕೊಂಡರೆ ಏನೆಲ್ಲ ತಾಪತ್ರಯ ಆಗುತ್ತದೆ ಅನ್ನೋದನ್ನು ಸ್ವಂತ ಅನುಭವದಿಂದ ನಮಗೆ ಹೇಳಲಿ ಎಂದರು. ಮತಾಂತರ ನಿಷೇಧ ಕಾಯ್ದೆ ರದ್ದು ಮಾಡುವ ಪ್ರಸ್ತಾಪದ ಬಗ್ಗೆ ಮಾತಾಡಿದ ತನ್ವೀರ್, ಬಲವಂತದ ಮತಾಂತರ ನಡೆಯಬಾರದು ಅಂತ ಸಂವಿಧಾನದಲ್ಲಿ (The Constitution) ಸ್ಪಷ್ಟವಾಗಿ ಹೇಳಿದೆ, ಕೆಲ ಸಮುದಾಯಗಳನ್ನು ಗುರಿ ಮಾಡಿ ಹಿಂದಿನ ಸರ್ಕಾರ ಕಾನೂನು ಜಾರಿ ಮಾಡಿದೆ, ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ತೀರ್ಮಾನ ತೆಗೆದುಕೊಂಡ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

