ಪ್ರೀತಿಸುತ್ತಿರುವ ಹುಡುಗಿಯ ತಂದೆ-ತಾಯಿಗೆ ಒಳ್ಳಿ ಬುದ್ದಿ ಕೊಡಿ: ದೇವಸ್ಥಾನ ಹುಂಡಿಯಲ್ಲಿ ವಿಚಿತ್ರ ಪತ್ರಗಳು ಪತ್ತೆ
ಇದು ವಿಶ್ವವಿಖ್ಯಾತ ಪ್ರವಾಸಿ ತಾಣ ನಂದಿಗಿರಿಧಾಮದ ತಪ್ಪಲಿನಲ್ಲಿರುವ ಪುರಾಣ ಪ್ರಸಿದ್ದ, ಐತಿಹಾಸ ಪ್ರಸಿದ್ದ ಶ್ರೀ ಭೋಗನಂದೀಶ್ವರ ದೇವಸ್ಥಾನ ಲವ್ ಮ್ಯಾರೇಜ್ನ ಕಲ್ಯಾಣ ಮಂಟಪವಾಗಿದೆ. ಹೀಗಾಗಿ ಇದರಿಂದಲೇ ಏನೋ ಕೆಲವು ಪ್ರೇಮಿಗಳು ತಮ್ಮ ಪ್ರೇಮ ವಿವೇದನೆಯನ್ನು ಹರಕೆ ರೂಪದಲ್ಲಿ ದೇವರ ಹುಂಡಿಯಲ್ಲಿ ಹಾಕಿದ್ದು ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿರುವ ಈ ದೇವಸ್ಥಾನ ಹುಂಡಿಯಲ್ಲಿ ಗರಿ ಗರಿ ನೋಟಿನ ಜೊತೆಗೆ ಚಿತ್ರ ವಿಚಿತ್ರ ಬೇಡಿಕೆಗಳ ಪತ್ರಗಳು ಪತ್ತೆಯಾಗಿವೆ. ಹುಂಡಿಯಲ್ಲಿ ಮಹಿಳೆಯ ಪೋಟೋ ಕಂಡು ಬಂದಿದ್ದು, ಆ ಪೋಟೋ ಹಿಂದೆ ಪದ್ಮ ಮತ್ತೆ ತಿರುಗಿ ಬಾ, ಅನ್ನೋ ಪ್ರೇಮ ನಿವೇದನೆ ಮಾಡಲಾಗಿದೆ.
ಚಿಕ್ಕಬಳ್ಳಾಪುರ, (ಡಿಸೆಂಬರ್ 02): ಇದು ವಿಶ್ವವಿಖ್ಯಾತ ಪ್ರವಾಸಿ ತಾಣ ನಂದಿಗಿರಿಧಾಮದ ತಪ್ಪಲಿನಲ್ಲಿರುವ ಪುರಾಣ ಪ್ರಸಿದ್ದ, ಐತಿಹಾಸ ಪ್ರಸಿದ್ದ ಶ್ರೀ ಭೋಗನಂದೀಶ್ವರ ದೇವಸ್ಥಾನ ಲವ್ ಮ್ಯಾರೇಜ್ನ ಕಲ್ಯಾಣ ಮಂಟಪವಾಗಿದೆ. ಹೀಗಾಗಿ ಇದರಿಂದಲೇ ಏನೋ ಕೆಲವು ಪ್ರೇಮಿಗಳು ತಮ್ಮ ಪ್ರೇಮ ವಿವೇದನೆಯನ್ನು ಹರಕೆ ರೂಪದಲ್ಲಿ ದೇವರ ಹುಂಡಿಯಲ್ಲಿ ಹಾಕಿದ್ದು ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿರುವ ಈ ದೇವಸ್ಥಾನ ಹುಂಡಿಯಲ್ಲಿ ಗರಿ ಗರಿ ನೋಟಿನ ಜೊತೆಗೆ ಚಿತ್ರ ವಿಚಿತ್ರ ಬೇಡಿಕೆಗಳ ಪತ್ರಗಳು ಪತ್ತೆಯಾಗಿವೆ. ಹುಂಡಿಯಲ್ಲಿ ಮಹಿಳೆಯ ಪೋಟೋ ಕಂಡು ಬಂದಿದ್ದು, ಆ ಪೋಟೋ ಹಿಂದೆ ಪದ್ಮ ಮತ್ತೆ ತಿರುಗಿ ಬಾ, ಅನ್ನೋ ಪ್ರೇಮ ನಿವೇದನೆ ಮಾಡಲಾಗಿದೆ.
ಹಾಗೇ ನಾನು ಪ್ರೀತಿಸುತ್ತಿರುವ ಹುಡುಗಿಯ ತಂದೆ ತಾಯಿಗೆ ಒಳ್ಳಿ ಬುದ್ದಿ ಕೊಡಿ. ಮುಕ್ತ ಮನಸ್ಸಿನಿಂದ ಒಪ್ಪುವಂತೆ ಮಾಡು ಭಗವಂತ, ನಾನು ಅವಳನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಯಾವುದೇ ತೊಂದರೆ ಆಗದೇ ಒಪ್ಪುವಂತೆ ಮಾಡು ಭಗವಂತ, ನನ್ನ ಗಂಡನಿಗೆ ಒಳ್ಳೆಯ ಕೆಲಸ ಸಿಗಲಿ, ನನ್ನ ಮಗ ಚೆನ್ನಾಗಿ ಓದಲಿ ಇಂಜಿನಿಯರ್ ಆಗಲಿ ಎಂದು ಬರೆದಿದ್ದ ಚೀಟಿಗಳು ಪತ್ತೆಯಾಗಿವೆ. ಹುಂಡಿ ಎಣಿಕೆ ವೇಳೆ ಇವುಗಳನ್ನು ನೋಡಿ ತಹಶೀಲ್ದಾರ್ ಶಾಕ್ ಆಗಿದ್ದಾರೆ.

