Liquor Price Hike: ನಾನು ಬಡವ ಸ್ವಾಮಿ ಎಣ್ಣೆ ರೇಟ್ ಕಡಿಮೆ ಮಾಡಿ
ಬಜೆಟ್ನಲ್ಲಿ ಆಲ್ಕೋಹಾಲ್ ಬೆಲೆ ಏರಿಕೆಗೆ ರಾಜ್ಯಾದ್ಯಂತ ಮದ್ಯಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಲೆ ಏರಿಕೆಯಿಂದ ಮದ್ಯಪ್ರಿಯರಿಗೆ ಆಘಾತವಾಗಿದ್ದು, ಹಾವೇರಿಯಲ್ಲಿ ಮದ್ಯಪ್ರಿಯರು ‘ನಾನು ಬಡವ ಸ್ವಾಮಿ, ಎಣ್ಣೆ ರೇಟ್ ಕಡಿಮೆ ಮಾಡಿ ಎಂದು ತನ್ನ ಅಳಲನ್ನ ತೋಡಿಕೊಂಡಿದ್ದಾರೆ.
ಹಾವೇರಿ: ಕಾಂಗ್ರೆಸ್ ನಾಯಕರುಗಳು ಚುನಾವಣಾ ಹಿಂದೆ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳನ್ನು ಒಂದೊಂದಾಗಿ ಜಾರಿ ಮಾಡುತ್ತಾ ಬರುತ್ತಿದೆ. ಅದರಂತೆ ನಿನ್ನೆ(ಜು.7) ನೂತನ ಸರ್ಕಾರದ ಮೊದಲ ಬಜೆಟ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ 14ನೇ ಬಜೆಟ್ನ್ನು ಮಂಡನೆ ಮಾಡಿದರು. ಇದಕ್ಕೆ ವಿರೋಧ ಪಕ್ಷಗಳ ನಾಯಕರುಗಳು ತೀವ್ರ ಟೀಕೆ ಮಾಡುತ್ತಿದ್ದು, ಈ ಮಧ್ಯೆ ಆಲ್ಕೋಹಾಲ್ ಬೆಲೆ ಏರಿಕೆಗೆ ರಾಜ್ಯಾದ್ಯಂತ ಮದ್ಯಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೌದು ಬೆಲೆ ಏರಿಕೆಯಿಂದ ಮದ್ಯಪ್ರಿಯರಿಗೆ ಆಘಾತವಾಗಿದ್ದು, ಹಾವೇರಿ(Haveri)ಯಲ್ಲಿ ಮದ್ಯಪ್ರಿಯರು ‘ನಾನು ಬಡವ ಸ್ವಾಮಿ, ಎಣ್ಣೆ ರೇಟ್ ಕಡಿಮೆ ಮಾಡಿ, ಅದ್ಯಾಕೆ ಹೆಚ್ಚಾಯ್ತು ಗೊತ್ತಾಗುತ್ತಿಲ್ಲ ಎಂದು ನೋವುನ್ನ ತೋಡಿಕೊಂಡಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 08, 2023 03:06 PM