ಕೋರ್ಟ್ ಕಲಾಪಕ್ಕೂ ತಟ್ಟಿದ ಲೋಡ್ ಶೆಡ್ಡಿಂಗ್ , ಮೊಬೈಲ್ ಟಾರ್ಚ್​ನಲ್ಲೇ ಪ್ರಕರಣ ವಿಚಾರಣೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 11, 2023 | 5:00 PM

ತುಮಕೂರು ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯದ ಸಂಕೀರ್ಣದಲ್ಲಿ, ಬಾಕಿ ಇದ್ದ ಪ್ರಕರಣಗಳ ಕುರಿತು ಕಲಾಪ ನಡೆಸುತ್ತಿದ್ದರು. ಈ ವೇಳೆ ಬೆಸ್ಕಾಂ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡಿದ್ದು, ಪರ್ಯಾಯ ವ್ಯವಸ್ಥೆ ಇಲ್ಲದೇ ಮೊಬೈಲ್ ಟಾರ್ಚ್ ಬಳಸಿ ವಕೀಲರ ಹಾಗೂ ಸಾರ್ವಜನಿಕರ ಅಹವಾಲು ನಡೆಸಲಾಗಿದೆ.

ತುಮಕೂರು, ಅ.11: ಕೋರ್ಟ್ ಕಲಾಪಕ್ಕೂ ವಿದ್ಯುತ್ ಲೋಡ್ ಶೆಡ್ಡಿಂಗ್ ಎಫೆಕ್ಟ್ ತಟ್ಟಿದೆ. ಹೌದು, ಇಂದು(ಅ.11) ಎಸಿ ಗೌರವಕುಮಾರ್ ಶೆಟ್ಟಿ ಅವರು  ತುಮಕೂರು(Tumakuru) ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯದ ಸಂಕೀರ್ಣದಲ್ಲಿ, ಬಾಕಿ ಇದ್ದ ಪ್ರಕರಣಗಳ ಕುರಿತು ಕಲಾಪ ನಡೆಸುತ್ತಿದ್ದರು. ಈ ವೇಳೆ ಬೆಸ್ಕಾಂ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡಿದ್ದು, ಪರ್ಯಾಯ ವ್ಯವಸ್ಥೆ ಇಲ್ಲದೇ ಮೊಬೈಲ್ ಟಾರ್ಚ್ ಬಳಸಿ ವಕೀಲರ ಹಾಗೂ ಸಾರ್ವಜನಿಕರ ಅಹವಾಲು ನಡೆಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲೇ ಹೀಗಾದರೇ ಜನಸಾಮಾನ್ಯರ ಪಾಡೇನು ಎಂದು ಸಾರ್ವಜನಿಕರು ಪ್ರಶ್ನಿಸಿದ್ದು, ಸಾರ್ವಜನಿಕ ವಲಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಕಾರ್ಯ ವೈಖರಿ ಬಗ್ಗೆ ಅಪಸ್ವರ ಕೇಳಿಬರುತ್ತಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್​ ಮಾಡಿ