ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಬಯಸುವ ಆಕಾಂಕ್ಷಿಗಳಿಂದಲೂ ಸೀರೆ ವಿತರಣೆ, ಬಾಡೂಟ ಆಯೋಜನೆ

ಅರುಣ್​ ಕುಮಾರ್​ ಬೆಳ್ಳಿ

Updated on: Feb 09, 2023 | 1:06 PM

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ರಾಮರಾಜ್ಯ, ಗ್ರಾಮರಾಜ್ಯದ ಕನಸು ಹೀಗೆ ಈಡೇರುತ್ತಿದೆ ಅನ್ನೋದು ಮಾತ್ರ ವಿಷಾದಕರ.

ಚಿಕ್ಕಬಳ್ಳಾಪುರ: ನೀವಂದುಕೊಳ್ಳುತ್ತಿರುವ ಹಾಗೆ ಇದು ವಿಧಾನಸಭಾ ಚುನಾವಣೆಯಲ್ಲಿ (assembly polls) ಸ್ಪರ್ಧಿಸಬಹುದಾದ ಆಕಾಂಕ್ಷಿಯೊಬ್ಬರು ಕ್ಷೇತ್ರದ ಮತದಾರರ ಮನವೊಲಿಸಿಕೊಳ್ಳಲು ಬಾಡೂಟ (non veg) ಹಾಕಿಸಿ ಸೀರೆ ಹಂಚುತ್ತಿರುವ ದೃಶ್ಯ ಅಲ್ಲ. ಆಫ್ಕೋರ್ಸ್ ಬಾಡೂಟ ಚುನಾವನಣೆ ಹಿನ್ನೆಲೆಯಲ್ಲೇ ಆಯೋಜನೆಗೊಂಡಿದೆ, ಅದು ಮುಂಬರಲಿರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ (Zilla Panchayat) ಚುನಾವಣೆ ಸ್ಪರ್ಧಿಸ ಬಯಸಿರುವ ಶಿವಕುಮಾರ್ ಹೆಸರಿನ ಬಿಜೆಪಿ ಮುಖಂಡರು ಇದನ್ನೆಲ್ಲ ಮಾಡುತ್ತಿದ್ದಾರೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ರಾಮರಾಜ್ಯ, ಗ್ರಾಮರಾಜ್ಯದ ಕನಸು ಹೀಗೆ ಈಡೇರುತ್ತಿದೆ ಅನ್ನೋದು ಮಾತ್ರ ವಿಷಾದಕರ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.