Assembly Polls: ಕೋವಿಡ್ ಸಂಕಷ್ಟದಲ್ಲಿ ಕೋಲಾರ ಜನರಿಗೆ ನೆರವಾಗದ ಸಿದ್ದರಾಮಯ್ಯ ಇಲ್ಲಿಂದ ಸ್ಪರ್ಧಿಸಲಿ ನಿರ್ಧರಿಸಿರುವುದು ಹತಾಷೆಯ ಪ್ರತೀಕ: ಸಿಟಿ ರವಿ

Assembly Polls: ಕೋವಿಡ್ ಸಂಕಷ್ಟದಲ್ಲಿ ಕೋಲಾರ ಜನರಿಗೆ ನೆರವಾಗದ ಸಿದ್ದರಾಮಯ್ಯ ಇಲ್ಲಿಂದ ಸ್ಪರ್ಧಿಸಲಿ ನಿರ್ಧರಿಸಿರುವುದು ಹತಾಷೆಯ ಪ್ರತೀಕ: ಸಿಟಿ ರವಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 09, 2023 | 2:32 PM

ಕಳೆದ ಸಲ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ತಮ್ಮ ಕ್ಷೇತ್ರದಲ್ಲೇ 36,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದರು ಮತ್ತು ಬಾದಾಮಿಯಲ್ಲಿ ಅತ್ಯಂತ ಕಡಿಮೆ ಅಂತರದಿಂದ ಗೆದ್ದಿದ್ದರು ಎಂದು ರವಿ ಹೇಳಿದರು.

ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಈ ಬಾರಿಯ ಕೋಲಾರದಿಂದ ಯಾಕೆ ಸ್ಪರ್ಧಿಸುತ್ತಿದ್ದಾರೆ ಅಂತ ಬಿಜೆಪಿ ನಾಯಕ ಸಿಟಿ ರವಿ (CT Ravi) ತಮ್ಮದೇ ಆದ ವಿಶ್ಲೇಷಣೆ ನೀಡಿದರು. ಕೋಲಾರ ಜನತೆಯ ಕಷ್ಟಗಳಿಗೆ ಯಾವತ್ತೂ ಸ್ಪಂದಿಸದವರು ಈಗ್ಯಾಕೆ ಇಲ್ಲಿಂದ ಸ್ಪರ್ಧಿಸಲು ಮುಂದಾಗಿದ್ದಾರೆ? ಕೋವಿಡ್ (Covid) ಸಂಕಷ್ಟದ ಪಿಡುಗಿನಲ್ಲಿ ಅವರು ಬಂದು ಜನರ ಕಷ್ಟ-ಸುಖ ವಿಚಾರಿಸಿದರಾ? ಎಂದು ಕೇಳಿದ ರವಿ, ಸಿದ್ದರಾಮಯ್ಯನವರಿಗೆ ಕೋಲಾರ ಜನರ ಯೋಗಕ್ಷೇಮ ಬೇಕಿಲ್ಲ, ಅವರಿಗೆ ಇದು ಸುರಕ್ಷಿತ ಕ್ಷೇತ್ರ ಅಂತ ಹೇಳಲಾಗಿದೆ, ಹಾಗಾಗಿ ಸ್ಪರ್ಧಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದರು. ಕಳೆದ ಸಲ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ತಮ್ಮ ಕ್ಷೇತ್ರದಲ್ಲೇ 36,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದರು ಮತ್ತು ಬಾದಾಮಿಯಲ್ಲಿ ಅತ್ಯಂತ ಕಡಿಮೆ ಅಂತರದಿಂದ ಗೆದ್ದಿದ್ದರು ಎಂದು ರವಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 09, 2023 02:29 PM