Alleged CDs against DK Shivakumar: ಸಿಬಿಐ ತನಿಖೆ ಮಾಡಿಸಲೇಬೇಕೆಂದು ಹಟಕ್ಕೆ ಬಿದ್ದಿರುವ ರಮೇಶ್ ಜಾರಕಿಹೊಳಿ ಪುನಃ ದೆಹಲಿಗೆ ಹೋಗಿದ್ದಾರೆ!

Alleged CDs against DK Shivakumar: ಸಿಬಿಐ ತನಿಖೆ ಮಾಡಿಸಲೇಬೇಕೆಂದು ಹಟಕ್ಕೆ ಬಿದ್ದಿರುವ ರಮೇಶ್ ಜಾರಕಿಹೊಳಿ ಪುನಃ ದೆಹಲಿಗೆ ಹೋಗಿದ್ದಾರೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 09, 2023 | 4:19 PM

ಬಹಳ ಬ್ಯೂಸಿಯಾಗಿದ್ದ ಶಾ ಒಂದು ವಾರದ ನಂತರ ಬನ್ನಿ ಅಂತ ಹೇಳಿದ್ದರಂತೆ. ಹಾಗಾಗೇ, ಗೃಹ ಸಚಿವರ ಅವರ ಅಪಾಯಿಂಟ್ಮೆಂಟ್ ಕೇಳಿಕೊಂಡು ಗುರುವಾರ ಮತ್ತೊಮ್ಮೆ ದೆಹಲಿಗೆ ಹೋಗಿದ್ದಾರೆ.

ನವದೆಹಲಿ: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಚಾಣಕ್ಯನಂತೆ ಹಟಕ್ಕೆ ಬಿದ್ದು ಪಕ್ಷದ ಚಾಣಕ್ಯನೆಂದು ಗುರುತಿಸಿಕೊಳ್ಳುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಯಾಗಲು ಕೇವಲ ಒಂದು ವಾರದ ಅವಧಿಯಲ್ಲಿ ಎರಡನೇ ಬಾರಿ ದೆಹಲಿಗೆ ಹೋಗಿದ್ದಾರೆ. ಅವರು ಹೋಗಿರುವ ಉದ್ದೇಶವೇನು ಅಂತ ನಿಮಗೆ ಗೊತ್ತಿದೆ. ಕೆಪಿಸಿಸಿ ಆಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಹಲವಾರು ಆರೋಪಗಳನ್ನು ಮಾಡಿರುವ ರಮೇಶ್ ಆರೋಪಗಳನ್ನು ಪುಷ್ಠೀಕರಿಸುವ ಸಿಡಿಗಳು ತಮ್ಮಲ್ಲಿವೆ ಅಂತ ಹೇಳಿ ಅವುಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಕೆಲ ದಿನಗಳ ಹಿಂದೆ ದೆಹಲಿಗೆ ಹೋಗಿ ಅಮಿತ್ ಶಾರನ್ನು ಭೇಟಿಯಾಗಿದ್ದರು. ಬಹಳ ಬ್ಯೂಸಿಯಾಗಿದ್ದ ಶಾ ಒಂದು ವಾರದ ನಂತರ ಬನ್ನಿ ಅಂತ ಹೇಳಿದ್ದರಂತೆ. ಹಾಗಾಗೇ, ಗೃಹ ಸಚಿವರ ಅವರ ಅಪಾಯಿಂಟ್ಮೆಂಟ್ ಕೇಳಿಕೊಂಡು ಗುರುವಾರ ಮತ್ತೊಮ್ಮೆ ದೆಹಲಿಗೆ ಹೋಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ