Loading video

ಅನಂತಕುಮಾರ ಹೆಗಡೆ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ನಿರ್ಧಾರ ತೆಗೆದುಕೊಳ್ಳುತ್ತಾರೆ: ಜಿ ಪರಮೇಶ್ವರ್, ಗೃಹ ಸಚಿವ

Updated on: Jan 16, 2024 | 12:52 PM

ಕನ್ನಡಪರ ಹೋರಾಟಗಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ಸು ಪಡೆಯಲಾಗುತ್ತಾ ಅಂತ ಕೇಳಿದಾಗಲೂ ಗೃಹ ಸಚಿವ ಪರಮೇಶ್ವರ್, ಗೊತ್ತಿಲ್ಲ, ಸಭೆಯಲ್ಲಿ ಏನು ಚರ್ಚೆ ನಡೆಯುತ್ತೋ ಗೊತ್ತಿಲ್ಲ, ಮುಖ್ಯಮಂತ್ರಿ ಸಹ ಸಭೆಯಲ್ಲಿರುತ್ತಾರೆ, ಯಾರಾದರೂ ಕೇಳಿದರೆ ಸರ್ಕಾರದ ಪರ ಉತ್ತರ ಕೊಡುತ್ತೇವೆ ಅನ್ನುತ್ತಾರೆ.

ಬೆಂಗಳೂರು: ಮಾಧ್ಯಮ ಪ್ರತಿನಿಧಿಗಳು ಕೇಳುವ ಪ್ರಶ್ನೆಗಳಿಗೆ ಗೃಹ ಸಚಿವ ಜಿ ಪರಮೇಶ್ವರ್ (G Parameshwara) ನೇರವಾದ ಉತ್ತರ ಉತ್ತರ ನೀಡೋದು ಬಹಳ ಕಡಿಮೆ ಸಂದರ್ಭಗಳಲ್ಲಿ ಮಾತ್ರ ಅನಿಸುತ್ತೆ! ಪ್ರಶ್ನೆ ಕೇಳಿದ ಕೂಡಲೇ ಅವರು ಗೊತ್ತಿಲ್ಲ ಅನ್ನುತ್ತ ಪ್ರತಿಕ್ರಿಯೆ ನೀಡಲು ಶುರುಮಾಡುತ್ತಾರೆ. ಇಂದು ನಗರದಲ್ಲಿ ಪತ್ರಕರ್ತರು ಅವರಿಗೆ ಸಂಸದ ಅನಂತಕುಮಾರ ಹೆಗಡೆ (Anantkumar Hegde) ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ (FIR) ದಾಖಲಾಗಿದೆ, ಸಂಸದರನ್ನು ಬಂಧಿಸಲಾಗುತ್ತದೆಯೇ ಅಂತ ಕೇಳಿದ ಪ್ರಶ್ನೆಗೆ ಗೃಹ ಸಚಿವ, ಗೊತ್ತಿಲ್ಲ, ಕುಮಟಾ ಪೊಲೀಸ್ ಠಾಣೆಯಲ್ಲ್ಲಿ ಪ್ರಕರಣ ದಾಖಲಾಗಿರುವುದು ಸತ್ಯ, ಸ್ಥಳೀಯ ಪೊಲೀಸರು ಸಾಕ್ಷ್ಯಗಳನ್ನು ಆಧರಿಸಿ ಕ್ರಮ ತೆಗೆದುಕೊಳ್ಳುತ್ತಾರೆ, ಅರೆಸ್ಟ್ ಮಾಡೋದು ಬಿಡೋದು ಅವರ ವಿಚೇಚನೆಗೆ ಬಿಟ್ಟಿದ್ದು, ಆದರೆ ಯಾರನ್ನಾದರೂ ಬಂಧಿಸಿ ಅಥವಾ ಬಂಧಿಸಿದವರನ್ನು ಬಿಟ್ಟುಬಿಡಿ ಅಂತ ತಾನ್ಯಾವತ್ತೂ ಹಸ್ತಕ್ಷೇಪ ಮಾಡೋದಿಲ್ಲ ಎಂದು ಹೇಳಿದರು. ಸ್ಥಳೀಯ ಪೊಲೀಸರು ಕೇಸು ದಾಖಲಿಸಿರುವ ಸೆಕ್ಷನ್ ಅಡಿ ಬಂಧನಕ್ಕೆ ಅವಕಾಶವಿದ್ದರೆ ಬಂಧಿಸುತ್ತಾರೆ, ಅದೇನೆ ಇದ್ದರೂ ಅದು ಅವರ ನಿರ್ಧಾರ ಮಾತ್ರ ಎಂದು ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ