ತಾವರೆಕೆರೆ ಮೆಟ್ರೋ ಸ್ಟೇಷನ್ ಹೆಸರು ಬದಲಿಸದಂತೆ ಸ್ಥಳೀಯ ನಿವಾಸಿಗಳ ಬಿಗಿಪಟ್ಟು
ಪಿಂಕ್ ಮೆಟ್ರೋ ಲೈನ್ ಓಪನ್ ಗೆ ಕೆಲವೇ ದಿನಗಳು ಮಾತ್ರ ಬಾಕಿ ಇರುವ ಸಮಯದಲ್ಲೇ ಮೆಟ್ರೋ ಸ್ಟೇಷನ್ ಗಳ ಹೆಸರು ಬದಲಿಸುವಂತೆ ಒತ್ತಡ ಹೆಚ್ಚಾಗುತ್ತಿದೆ. ಪಿಂಕ್ ಲೈನ್ ಮೆಟ್ರೋ ಮಾರ್ಗದಲ್ಲಿ ಬರುವ ಮೂರು ಮೆಟ್ರೋ ಸ್ಟೇಷನ್ ಹೆಸರು ಬದಲಾಯಿಸುವಂತೆ ಈಗಾಗಲೇ ಸ್ಥಳೀಯ ಶಾಸಕ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಬಿಎಂಆರ್ಸಿಎಲ್ ಎಂಡಿಗೆ ಪತ್ರ ಬರೆದಿದ್ದರು. ಇನ್ನೊಂದೆಡೆ ಪಕ್ಕದಲ್ಲೇ ಇರುವ ಬಿಸ್ಮಿಲ್ಲಾ ನಗರದ ನಿವಾಸಿಗಳು, ತಾವರೆಕೆರೆ ಮೆಟ್ರೋ ಸ್ಟೇಷನ್ ಗೆ ಬಿಸ್ಮಿಲ್ಲಾ ನಗರ ಮೆಟ್ರೋ ಸ್ಟೇಷನ್ ಎಂದು ಹೆಸರಿಡುವಂತೆ ಎಂಡಿ ಗೆ ಭೇಟಿ ಮಾಡಿ ಮನವಿ ನೀಡಿದ್ದರು.
ಬೆಂಗಳೂರು, (ಸೆಪ್ಟೆಂಬರ್ 16): ಪಿಂಕ್ ಮೆಟ್ರೋ ಲೈನ್ ಓಪನ್ ಗೆ ಕೆಲವೇ ದಿನಗಳು ಮಾತ್ರ ಬಾಕಿ ಇರುವ ಸಮಯದಲ್ಲೇ ಮೆಟ್ರೋ ಸ್ಟೇಷನ್ ಗಳ ಹೆಸರು ಬದಲಿಸುವಂತೆ ಒತ್ತಡ ಹೆಚ್ಚಾಗುತ್ತಿದೆ. ಪಿಂಕ್ ಲೈನ್ ಮೆಟ್ರೋ ಮಾರ್ಗದಲ್ಲಿ ಬರುವ ಮೂರು ಮೆಟ್ರೋ ಸ್ಟೇಷನ್ ಹೆಸರು ಬದಲಾಯಿಸುವಂತೆ ಈಗಾಗಲೇ ಸ್ಥಳೀಯ ಶಾಸಕ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಬಿಎಂಆರ್ಸಿಎಲ್ ಎಂಡಿಗೆ ಪತ್ರ ಬರೆದಿದ್ದರು. ಇನ್ನೊಂದೆಡೆ ಪಕ್ಕದಲ್ಲೇ ಇರುವ ಬಿಸ್ಮಿಲ್ಲಾ ನಗರದ ನಿವಾಸಿಗಳು, ತಾವರೆಕೆರೆ ಮೆಟ್ರೋ ಸ್ಟೇಷನ್ ಗೆ ಬಿಸ್ಮಿಲ್ಲಾ ನಗರ ಮೆಟ್ರೋ ಸ್ಟೇಷನ್ ಎಂದು ಹೆಸರಿಡುವಂತೆ ಎಂಡಿ ಗೆ ಭೇಟಿ ಮಾಡಿ ಮನವಿ ನೀಡಿದ್ದರು.
ಆದ್ರೆ, ತಾವರೆಕೆರೆ ಮೆಟ್ರೋ ಸ್ಟೇಷನ್ ಹೆಸರು ಬದಲಾವಣೆಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ತಾವರೆಕೆರೆ ಮೆಟ್ರೋ ಸ್ಟೇಷನ್ ಹೆಸರು ಬದಲಿಸಬಾರದು ಎಂದು ಆಗ್ರಹಿಸಿದ್ದಾರೆ. ಈ ಸಂಬಂಧ ಸ್ಥಳೀಯ ನಿವಾಸಿಗಳು BMRCL ಮುಖ್ಯ ಕಚೇರಿಗೆ ಹಾಗೂ ಸಚಿವ ಕೃಷ್ಣ ಭೈರೇಗೌಡಗೆ ಮನವಿ ಸಲ್ಲಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 16, 2026 03:08 PM
Loading...
Unable to load recommendations.
Follow Us
