‘ನನ್ನ ಕನಸಿನ ಭಾರತ ಹೇಗಿರಬೇಕು ಅಂತ ಹೇಳಿದ್ರೆ ಕಾಂಟ್ರವರ್ಸಿ ಆಗತ್ತೆ’: ಧ್ರುವ ಸರ್ಜಾ
ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದು (ಏ.26) ಮತದಾನ ನಡೆಯುತ್ತಿದೆ. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಕೂಡ ಮತದಾನ ಮಾಡಿದ್ದಾರೆ. ಎಲ್ಲರೂ ಮತದಾನ ಮಾಡಬೇಕು ಎಂದು ಸೆಲೆಬ್ರಿಟಿಗಳು ಪ್ರೇರೇಪಿಸಿದ್ದಾರೆ. ಬೆಂಗಳೂರಿನಲ್ಲಿ ಧ್ರುವ ಸರ್ಜಾ ಅವರು ಪತ್ನಿ ಪ್ರೇರಣಾ ಜೊತೆ ಬಂದು ಓಟ್ ಮಾಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..
ನಟ ಧ್ರುವ ಸರ್ಜಾ (Dhruva Sarja) ಅವರು ‘ಮಾರ್ಟಿನ್’, ‘ಕೆಡಿ’ ಮುಂತಾದ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇಂದು (ಏಪ್ರಿಲ್ 26) ಅವರು ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿ ಮತದಾನ ಮಾಡಲು ಬಂದಿದ್ದಾರೆ. ಬೆಂಗಳೂರಿನಲ್ಲಿ ಧ್ರುವ ಸರ್ಜಾ ಅವರು ಓಟ್ ಮಾಡಿದ್ದಾರೆ. ಅವರ ಜೊತೆ ಪತ್ನಿ ಪ್ರೇರಣಾ ಕೂಡ ಬಂದು ಮತ ಚಲಾಯಿಸಿದ್ದಾರೆ. ಮತದಾನ (Voting) ಮಾಡಿದ ಬಳಿಕ ಧ್ರುವ ಸರ್ಜಾ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಕನಸಿನ ಭಾರತ ಹೇಗಿರಬೇಕು ಎಂಬ ಪ್ರಶ್ನೆ ಅವರಿಗೆ ಕೇಳಲಾಗಿದೆ. ‘ಮುಂದೆ ಯಾರ ಸರ್ಕಾರ ಬರುತ್ತೆ ಅನ್ನೋದನ್ನು ನೋಡೋಣ. ನನ್ನ ಕನಸಿನ ಭಾರತ ಹೇಗಿರಬೇಕು ಅಂತ ಹೇಳಿದರೆ ಕಾಂಟ್ರವರ್ಸಿ ಆಗುತ್ತೆ. ಹಾಗಾಗಿ ಅದರ ಬಗ್ಗೆ ಮಾತಾಡೋದು ಬೇಡ. ಜೈ ಶ್ರೀರಾಮ್, ಜೈ ಆಂಜನೇಯ’ ಎಂದಿದ್ದಾರೆ ಧ್ರುವ ಸರ್ಜಾ. ‘ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು. ಸಂಜೆ 6 ಗಂಟೆ ತನಕ ಸಮಯ ಇದೆ. ದಯವಿಟ್ಟು ಎಲ್ಲರೂ ಬಂದು ಮತ ಚಲಾಯಿಸಿ ’ ಎಂದು ಧ್ರುವ ಸರ್ಜಾ ಮನವಿ ಮಾಡಿದ್ದಾರೆ. ‘ನಮ್ಮ ಮನೆಯಲ್ಲಿ ಕೆಲಸ ಮಾಡುವ ಎಲ್ಲರೂ ಓಟ್ ಮಾಡಲು ರಜೆ ತೆಗೆದುಕೊಂಡಿದ್ದಾರೆ. ಅದೇ ರೀತಿ ಎಲ್ಲರೂ ಅವರವರ ಊರುಗಳಿಗೆ ಹೋಗಿ ಮತದಾನ ಮಾಡುತ್ತಿದ್ದಾರೆ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.