Lok Sabha Election 2024: ಸ್ಟ್ರಾಂಗ್ ರೂಮ್​​ ಕೀ ಮನೆಯಲ್ಲೇ ಬಿಟ್ಟು ಬಂದ ಅಧಿಕಾರಿ!

| Updated By: ಆಯೇಷಾ ಬಾನು

Updated on: Jun 04, 2024 | 8:19 AM

ವಿಜಯಪುರದಲ್ಲಿ ಅಧಿಕಾರಿ ಸ್ಟ್ರಾಂಗ್ ರೂಮ್​ನ ಬೀಗದ ಕೈ ಮನೆಯಲ್ಲೇ ಮರೆತು ಬಂದ ಪ್ರಸಂಗ ನಡೆದಿದೆ. ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಶರೀಫ್ ಅವರು ಸ್ಟ್ರಾಂಗ್ ರೂಮ್​ನ ಬೀಗದ ಕೈಯನ್ನು ಮನೆಯಲ್ಲೇ ಬಿಟ್ಟು ಬಂದಿದ್ದರು. ಲಾಕ್ ಓಪನ್ ಮಾಡಲು ಹೋದಾಗ ತಮ್ಮ ಬಳಿ ಕೀ ಇಲ್ಲದಿರುವುದು ತಿಳಿದುಬಂದಿದೆ.

ವಿಜಯಪುರ, ಜೂನ್.04: ಲೋಕಸಭಾ ಚುನಾವಣೆ 2024ರ ಫಲಿತಾಂಶಕ್ಕೆ ಇನ್ನು ಕೆಲವೇ ಗಂಟೆಗಳು ಮಾತ್ರ ಬಾಕಿ ಇವೆ. ಈಗಾಗಲೇ ಎಲ್ಲಾ ಕಡೆ ಬಹುತೇಕ ಸ್ಟ್ರಾಂಗ್ ರೂಮ್​ಗಳು ಓಪನ್ ಆಗಿದ್ದು ಅಂಚೆ ಮತ ಎಣಿಕೆ ಕೂಡ ಆರಂಭವಾಗಿದೆ. ಆದರೆ ವಿಜಯಪುರದಲ್ಲಿ ಅಧಿಕಾರಿ ಸ್ಟ್ರಾಂಗ್ ರೂಮ್​ನ ಬೀಗದ ಕೈ ಮನೆಯಲ್ಲೇ ಮರೆತು ಬಂದ ಪ್ರಸಂಗ ನಡೆದಿದೆ.

ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಶರೀಫ್ ಅವರು ಸ್ಟ್ರಾಂಗ್ ರೂಮ್​ನ ಬೀಗದ ಕೈಯನ್ನು ಮನೆಯಲ್ಲೇ ಬಿಟ್ಟು ಬಂದಿದ್ದರು. ಲಾಕ್ ಓಪನ್ ಮಾಡಲು ಹೋದಾಗ ತಮ್ಮ ಬಳಿ ಕೀ ಇಲ್ಲದಿರುವುದು ತಿಳಿದುಬಂದಿದೆ. ತಕ್ಷಣವೇ ಶರೀಫ್ ತಮ್ಮ ಮನೆಗೆ ಹಿಂದಿರುಗಿದ್ದು ಕೀ ತಂದು ಈಗ ಸ್ಟ್ರಾಂಗ್ ರೂಮ್ ಓಪನ್ ಮಾಡಿದ್ದಾರೆ. ಅಧಿಕಾರಿಯ ಎಡವಟ್ಟಿನಿಂದಾಗಿ ಸ್ಟ್ರಾಂಗ್ ರೂಮ್ ಓಪನ್ ಮಾಡಲು ಕೊಂಚ ತಡವಾಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನ ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published on: Jun 04, 2024 08:19 AM