ಗೀತಾ ಪರ ಪ್ರಚಾರ: ಶಿವಮೊಗ್ಗಕ್ಕೆ ಒಂದೇ ಕಾರಿನಲ್ಲಿ ತೆರಳಿದ ರಾಹುಲ್​, ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್​

|

Updated on: May 02, 2024 | 2:52 PM

ಶಿವಮೊಗ್ಗದ ಕಾಂಗ್ರೆಸ್​ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್(Geetha Shivrajkumar)​ ಪರ ಪ್ರಚಾರ ಮಾಡಲು ರಾಹುಲ್​ ಗಾಂಧಿ ಇಂದು ಶಿವಮೊಗ್ಗಕ್ಕೆ ಭೇಟಿ ನೀಡುತ್ತಿದ್ದಾರೆ. ಒಂದೇ ಕಾರಿನಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ತೆರಳಿದ್ದಾರೆ. ಇದಕ್ಕೂ ಮುನ್ನ ನಿನ್ನೆ ಸಚಿವ ಮಧು ಬಂಗಾರಪ್ಪ ಮಾತನಾಡಿ, ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ. ನಗರದಲ್ಲಿ ಮತದಾರರು ಹಾಗೂ ನಮ್ಮ ಮುಖಂಡರ ನಡುವಿನ ಬಾಂಧವ್ಯ ನೋಡಿದಾಗ ನಾವು ಅತೀ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂಬ […]

ಶಿವಮೊಗ್ಗದ ಕಾಂಗ್ರೆಸ್​ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್(Geetha Shivrajkumar)​ ಪರ ಪ್ರಚಾರ ಮಾಡಲು ರಾಹುಲ್​ ಗಾಂಧಿ ಇಂದು ಶಿವಮೊಗ್ಗಕ್ಕೆ ಭೇಟಿ ನೀಡುತ್ತಿದ್ದಾರೆ. ಒಂದೇ ಕಾರಿನಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ತೆರಳಿದ್ದಾರೆ. ಇದಕ್ಕೂ ಮುನ್ನ ನಿನ್ನೆ ಸಚಿವ ಮಧು ಬಂಗಾರಪ್ಪ ಮಾತನಾಡಿ, ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ.

ನಗರದಲ್ಲಿ ಮತದಾರರು ಹಾಗೂ ನಮ್ಮ ಮುಖಂಡರ ನಡುವಿನ ಬಾಂಧವ್ಯ ನೋಡಿದಾಗ ನಾವು ಅತೀ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ಇದು ನಮ್ಮ ಬೂತ್ , ನಮ್ಮ ಜವಾಬ್ದಾರಿ ಕಾರ್ಯಕ್ರಮದಡಿ ಉತ್ತಮವಾಗಿ ಕೆಲಸ ನಡೆಯುತ್ತಿದೆ. ಈ ಹಿಂದೆಲ್ಲಾ ಭಾಷಣ ಮಾಡಿ ಮತ ಹಾಕಿಸಿಕೊಳ್ಳುತ್ತಿದ್ದರು.

ಈಗ ಆ ರೀತಿ ಇಲ್ಲ, ಮತದಾರರ ಮನೆಗೆ ಹೋಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಆಮೇಲೆ ಅವರು ಮತ ಹಾಕುವ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು. ಶಿವಮೊಗ್ಗದಲ್ಲಿ ಮೇ 7 ರಂದು ಚುನಾವಣಾ ನಡೆಯಲಿದ್ದು, ಜೂನ್​ 4ಕ್ಕೆ ಫಲಿತಾಂಶ ಹೊರಬರಲಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ