ಮದುವೆ ಮನೆಯಲ್ಲಿಯೂ ಮತದಾನ ಜಾಗೃತಿ! ಇಲ್ಲಿದೆ ವಿಡಿಯೋ

| Updated By: ಗಣಪತಿ ಶರ್ಮ

Updated on: Apr 16, 2024 | 1:11 PM

ಲೋಕಸಭೆ ಚುನಾವಣೆಯಲ್ಲಿ ಮತದಾನ ಹೆಚ್ಚಿಸಲು ಜಾಗೃತಿ ಮೂಡಿಸುವ ಸಲುವಾಗಿ ಚುನಾವಣಾ ಆಯೋಗ ಅನೇಕ ಕ್ರಮಗಳನ್ನು ಕೈಗೊಂಡಿದೆ. ಈ ಮಧ್ಯೆ, ದಾವಣಗೆರೆಯ ಮದುವೆ ಮನೆಯೊಂದರಲ್ಲಿ ವಿಶೇಷವಾಗಿ ಮತದಾನ ಜಾಗೃತಿ ಮೂಡಿಸಿ ವಧು ವರರು ಗಮನ ಸೆಳೆದರು. ಮೇ 7ರಂದು ಮತದಾನ ಮಾಡುವಂತೆ ಆಗಮಿಸಿದ ಬಂಧುಗಳಲ್ಲಿ ಮನವಿ ಮಾಡಿದರು.

ದಾವಣಗೆರೆ, ಏಪ್ರಿಲ್ 16: ಲೋಕಸಭೆ ಚುನಾವಣೆಗೆ (Lok Sabha Elections) ದಿನಗಣನೆ ಆರಂಭವಾಗಿದೆ. ಕರ್ನಾಟಕದಲ್ಲಿ (Karnataka) ಮೊದಲ ಹಂತದ ಮತದಾನ ಏಪ್ರಿಲ್ 26 ರಂದು ನಡೆಯಲಿದ್ದು, 14 ಕ್ಷೇತ್ರಗಳಲ್ಲಿ ವೋಟಿಂಗ್ ನಡೆಯಲಿದೆ. ಮೇ 7ರಂದು ಉಳಿದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಈ ಮಧ್ಯೆ, ರಾಜ್ಯದಾದ್ಯಂತ ಚುನಾವಣಾ ಪ್ರಚಾರದ ಭರಾಟೆ ಜೋರಾಗಿದೆ. ಮತದಾನ ಪ್ರಮಾಣ ಹೆಚ್ಚಿಸಲು, ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗವೂ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಮಧ್ಯೆ, ದಾವಣಗೆರೆ ನಗರದ ಎವಿಕೆ ಕಾಲೇಜು ರಸ್ತೆಯ ಅಕ್ಕ ಮಹಾದೇವಿ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಯೊಂದರಲ್ಲಿಯೂ (Marriage) ಮತದಾನ ಜಾಗೃತಿ ಮೂಡಿಸಲಾಯಿತು.

ದಾವಣಗೆರೆ ನಗರದ ಪಿಜೆ ಬಡಾವಣೆ ನಿವಾಸಿ ಮಂಗಳಾ – ಚಂದ್ರಶೇಖರ ಪುತ್ರ ರಾಮಕುಮಾರ ಹಾಗೂ ಪ್ರೇಮಾ – ನಿಂಗಪ್ಪ ಕರಿಗಾರ ದಂಪತಿಗಳ ಪುತ್ರಿ ತನುಜಾ ಮದುವೆಯಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು. ಮದುವೆಗೆ ಬಂದ ಎಲ್ಲ ಸಂಬಂಧಿಕರಿಗೆ ವಧು ವರರು ಮತದಾನ ಮಾಡುವಂತೆ ಮನವಿ ಮಾಡಿದರು. ಮೇ 7 ರಂದು ತಪ್ಪದೇ (ಉತ್ತರ ಕರ್ನಾಟಕ ಭಾಗದಲ್ಲಿ 2ನೇ ಹಂತದಲ್ಲಿ ಮತದಾನ‌ ನಡೆಯಲಿದೆ) ಮತದಾನ ಮಾಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಏಪ್ರಿಲ್ 25, 26 ರಂದು ಚಿಕ್ಕಮಗಳೂರಿನ ಹೋಂ ಸ್ಟೇ, ರೇಸಾರ್ಟ್​ಗಳಲ್ಲಿ ಸಿಗಲ್ಲ ಬುಕಿಂಗ್

ಲೋಕಸಭೆ ಚುನಾವಣೆ ಏಪ್ರಿಲ್ 19ರಂದು ಆರಂಭಗೊಂಡು 7 ಹಂತಗಳಲ್ಲಿ ನಡೆಯಲಿದ್ದು, ಜೂನ್​ನಲ್ಲಿ ಕೊನೆಗೊಳ್ಳಲಿದೆ. ಜೂನ್​ 4ರಂದು ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕದ 14 ಕ್ಷೇತ್ರಗಳಿಗೆ ಏಪ್ರಿಲ್ 26 ಮತ್ತು ಉಳಿದ 14 ಕ್ಷೇತ್ರಗಳಿಗೆ ಮೇ 7ರಂದು ಚುಣಾವಣೆ ನಡೆಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us on