ಲೋಕಾಯುಕ್ತ ದಾಳಿ: ಲೋಕೋಪಯೋಗಿ ಇಲಾಖೆ ಇಂಜಿನಿಯರ್ ನ ಅರಮನೆಯಂಥ ಮನೆಯಲ್ಲಿ ಅಪಾರ ಚಿನ್ನಾಭರಣ, ಕಂತೆ ಕಂತೆ ನೋಟು!
ಸರ್ಕಾರೀ ನೌಕರರನ್ನು ಸರ್ಕಾರದ ಮಕ್ಕಳೆಂದು ಇದೇ ಕಾರಣಕ್ಕೆ ಕರೆಯುತ್ತಾರೆ. ಚಿನ್ನದಾಭರಣಗಳು, ಬೆಳ್ಳಿ ಪಾತ್ರೆ ಮತ್ತು ಒಡವೆಗಳು, ಕಂತೆ ಕಂತೆ ನೋಟು, ಅರಮನೆಯಥ ಮನೆ-ಮತ್ತೇನು ಬೇಕು ಐಷಾರಾಮಿ ಬದುಕಿಗೆ? ಬಹುತೇಕ ಸರ್ಕಾರಿ ಅಧಿಕಾರಿಗಳಳು ಹೀಗೆ ಆದಾಯಕ್ಕೆ ಮೀರಿದ ಆಸ್ತಿ ಹೊಂದಿರುತ್ತಾರೆ ಆದರೆ ಎಲ್ಲರನ್ನೂ ಲೋಕಾಯುಕ್ತ ಬಲೆಗೆ ಕೆಡವುದು ಸಾಧ್ಯವೇ? ಹಾಗಾದಲ್ಲಿ ರಾಜ್ಯದಲ್ಲಿ ಸುಭಿಕ್ಷೆ!
ಚಿತ್ರದುರ್ಗ: ಆದಾಯಕ್ಕೆ ಮೀರಿದ ಆಸ್ತಿ ಪಾಸ್ತಿ ಹೊಂದಿರುವ ರಾಜ್ಯದ ಸರ್ಕಾರಿ ಅಧಿಕಾರಿಗಳ (government officials) ಮನೆ ಮೇಲೆ ದಾಳಿ ನಡೆಸಿ ಅವರಲ್ಲಿರುವ ಹಣ ಮತ್ತು ಆಭರಣಗಳನ್ನು ವಶಪಡಿಸಿಕೊಂಡರೆ ನಿಸ್ಸಂದೇಹವಾಗಿ ರಾಜ್ಯದಲ್ಲಿ ತಾಂಡವಾಡುತ್ತಿರುವ ಭೀಕರ ಬರದ ಸ್ಥಿತಿಯನ್ನು (drought) ಸುಲಭವಾಗಿ ಹೋಗಲಾಡಿಸಬಹುದು. ನಾವು ಹೀಗೆ ಹೇಳಲು ಕಾರಣವಿದೆ. ಇಲ್ನೋಡಿ, ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಬೆಂಗಳೂರಲ್ಲಿ ಕೆಲಸ ಮಾಡುವ ಸತೀಶ್ ಬಾಬು (Satish Babu) ಅವರ ಚಿತ್ರದುರ್ಗದಲ್ಲಿರುವ ಮನೆಯ ಮೇಲೆ ಇಂದು ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ ವಿಡಿಯೋದಲ್ಲಿ ಕಾಣುತ್ತಿರುವುದೆಲ್ಲ ಬರಾಮತ್ತಾಗಿದೆ. ಸತೀಶ್ ಅವರ ಬೆಂಗಳೂರು ಮನೆಯ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋಲಾರ ಮೂಲದ ಸತೀಶ್ ಬಾಬು, ಹಿಂದೆ ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸಿದ್ದರಂತೆ. ಅವರ ಮನೆಯನ್ನು ನೋಡಿದರೆ ಕೇವಲ ಕುಬೇರರು ಮಾತ್ರ ಇಂಥದನ್ನು ಕಟ್ಟಿಸಲು ಸಾಧ್ಯವಾಗುತ್ತದೆ ಅನಿಸದಿರದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ