ನಿಖಿಲ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಮತ್ತು ಮಿಲಿಟರಿ ಸೇರುವ ಅದಮ್ಯ ಆಸೆ ಇಟ್ಟುಕೊಂಡಿದ್ದ: ಮೃತನ ಮಾವ
ಗದಗ ನಗರದ ಹೊರವಲಯದಲ್ಲಿರುವ ಮುಳುಗುಂದ ನಾಕಾದ ಬಳಿ ಅಪಘಾತ ಸಂಭವಿಸಿದೆ. ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಹಾಗೆ, ಯಶ್ ಬೆಂಗಾವಲು ಪಡೆಯ ಜೀಪು ನಿಖಿಲ್ ಓಡಿಸುತ್ತಿದ್ದ ಬೈಕ್ ಗೆ ಗುದ್ದಿದೆ. ಆದರೆ ಮೃತನ ಮಾವ ಹೇಳುವ ಪ್ರಕಾರ ಖಾಸಗಿ ಜೀಪೊಂದು ಅಪಘಾತಕ್ಕೆ ಕಾರಣವಾಗಿದೆ. ವಾಹನ ಯಾವುದಾದರೇನು, ಅಭಿಮಾನದ ಅತಿರೇಕಕ್ಕೆ ಮತ್ತು ಯುವಜೀವ ಬಲಿಯಾಗಿದೆ.
ಗದಗ: ಅಭಿಮಾನದ ಅತಿರೇಕತನ ಬೇಡ ಅಂತ ನಾವು ಯಾವಾಗಲೂ ಹೇಳುತ್ತಿರುವ ಹಾಗೆ ನಿನ್ನೆ ತನ್ನ ಅಭಿಮಾನಿಗಳ ದಾರುಣ ಸಾವಿನ ಹಿನ್ನೆಲೆಯಲ್ಲಿ ಜಿಲ್ಲೆಯ ಸೂರಣಗಿಗೆ (Suranagi) ಮೃತರ ಕುಟುಂಬಗಳನ್ನು ಸಂತೈಸಲು ಬಂದಿದ್ದ ಚಿತ್ರನಟ ಯಶ್ (cine actor Yash) ಸಹ ಹೇಳಿದ್ದರು. ಯಶ್ ಅವರನ್ನು ನೋಡಲು ಸೂರಣಗಿಗೆ ಹೋಗಿದ್ದ ಜಿಲ್ಲೆಯ ಬಿಂಕದಕಟ್ಟಿ ಗ್ರಾಮದ 20-ವರ್ಷ ವಯಸ್ಸಿನ ನಿಖಿಲ್ (Nikhil) ಗದುಗಿಗೆ ಗೆಳೆಯನ ಬೈಕ್ ಮೇಲೆ ವಾಪಸ್ಸು ಬರುವಾಗ ಜೀಪೊಂದು ಢಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯೊಂದಲ್ಲಿ ಮರಣವನ್ನಪ್ಪಿದ್ದಾನೆ. ಈ ದುರ್ಘಟನೆಯನ್ನು ಹೇಗೆ ವಿವರಿಸಬೇಕೆಂದು ಅರ್ಥವಾಗುತ್ತಿಲ್ಲ. ನಟ ಯಶ್ ಅಭಿಮಾನದ ಆವೇಶದಲ್ಲಿ ಹುಚ್ಚು ಸಾಹಸಗಳನ್ನು ಮಾಡಬೇಡಿ ಅಂತ ಪದೇಪದೆ ವಿನಂತಿಸಿಕೊಂಡರೂ ಬಿಸಿರಕ್ತದ ಯುವಕರ ತಲೆಗೆ ಅದು ಹೋಗುತ್ತಿಲ್ಲ. ನಿಖಿಲ್ ಅವರ ಮಾವ ಗದುಗಿನ ಟಿವಿ9 ವರದಿಗಾಗರನೊಂದಿಗೆ ಮಾತಾಡುವಾಗ ಅವನೊಬ್ಬ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಮತ್ತು ದೇಶಸೇವೆ ಮಾಡುವ ಉತ್ಕಟ ಆಸೆ ಇಟ್ಟುಕೊಂಡಿದ್ದ ಎಂದು ಹೇಳಿದರು. ಪಿಯುಸಿ ಆದ ಬಳಿಕ ಅವನು ಮಿಲಿಟರ ಸೇವೆಗೆ ಆಯ್ಕೆಯಾಗಿದ್ದರೂ ಮೈಮೇಲೆ ಟ್ಯಾಟ್ಟೂ ಹಾಕಿಸಿಕೊಂಡಿದ್ದ ಕಾರಣ ವಾಪಸ್ಸು ಕಳಿಸಲಾಗಿತ್ತು ಅಂತ ಅವರು ಹೇಳುತ್ತಾರೆ. ಈ ದುರಂತಕ್ಕೆ ಕೇವಲ ನಿಖಿಲ್ ಮಾತ್ರ ಕಾರಣ ಅಂದರೆ ಉತ್ಪ್ರೇಕ್ಷೆ ಅನಿಸಲಿಕ್ಕಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ